ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನ ಕೋಟತಟ್ಟು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಬ್ರಹ್ಮಕಲಾಶಾಭಿಷೇಕ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಬುಧವಾರ ಸಂಪನ್ನಗೊಂಡಿತು.

ಆ ಪ್ರಯುಕ್ತ ವಿವಿಧ ಧಾರ್ಮಿಕ ಸಲುವಾಯ ವೇ.ಮೂ.ಮಧುಸೂಧನ ಬಾಯರಿ ನೇತ್ರತ್ವದಲ್ಲಿ ಕಲಾಹೋಮ ,ಪಲ್ಲ ಪೂಜೆ ಮಹಾಮಂಗಳಾರತಿ ಪೂಜಾ ಕಾರ್ಯಗಳು ನೆರವೆರಿದವು, ದೇವಳದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ಹಗೂ ಉದ್ಯಮಿ ಬೀಜು ನಾಯರ್ ಇವರುಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷ ಬಸವ ಕುಂದರ್,ಉಪಾಧ್ಯಕ್ಷರಾದ ಯೋಗೇಂದ್ರ ತಿಂಗಳಾಯ, ಪ್ರಧಾನಕಾರ್ಯದರ್ಶಿ ರಮೇಶ್ ಪೂಜಾರಿ,ಜೊತೆಕಾರ್ಯದರ್ಶಿ ಮಂಜುನಾಥ ,ಗೌರವ ಸಲಹೆಗಾರರಾದ ಸಂಜೀವ ಆರ್ ಕುಂದರ್,ಬಾಬು ಪೂಜಾರಿ,ನಾಗಪ್ಪ ಪೂಜಾರಿ,ಕೃಷ್ಣ ಪುತ್ರನ್ ,ಸಿದ್ಧಿ ಶ್ರೀನಿವಾಸ್ ಪೂಜಾರಿ,ಅನಂತ ಆರ್ ಕುಂದರ್,ಉದಯ್ ತಿಂಗಳಾಯ,ಚಂದ್ರ ಪುತ್ರನ್,ವಿಠ್ಠಲ ಪೂಜಾರಿ,ಅರ್ಚಕರಾದ ನೆಂದಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ತಿರುಪತಿ ದಾಸಸಾಹಿತ್ಯ ನೊಂದಾಯಿತ ಶಿರಸಿ ಮಾರಿಕಾಂಬಾ ಭಜನಾ ತಂಡ,ಭಗವತ್ ಭಜನಾ ತಂಡದ ಕೂಡುವಿಕೆಯಿಂದ ಭಜನಾ ಸಂಕೀರ್ತನೆ, ರಾತ್ರಿ 9.ಗ ತೆಕ್ಕಟ್ಟೆ ಕನ್ನುಕೆರೆ ಓಂಕಾರ್ ಕಲಾವಿದರಿಂದ ಎಷ್ಟ್ ಹೇಳ್ಡ್ರೂ ಅಷ್ಟೆ ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಂಡಿತು.











