ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೃಷ್ಟಿ ಪ್ರಧಾನ ಯೋಜನೆ 2021-22 ರ ಅಡಿಯಲ್ಲಿ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದುಮನೆ ಇವರ ನೇತೃತ್ವದಲ್ಲಿ ಮಾ.27 ಭಾನುವಾರದಂದು ಬೆಳಿಗ್ಗೆ 9.00 ರಿಂದ 12.00 ರ ತನಕ ಕುಂದಾಪುರ ಬೋರ್ಡ್ ಹೈಸ್ಕೂಲಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಅಗತ್ಯವಿರುವವರಿಗೆ ನುರಿತ ವೈದ್ಯ ತಂಡದಿಂದ ಹೊಲಿಗೆ ರಹಿತ ಚಿಕಿತ್ಸೆಯನ್ನು ಶಿರೂರು ಮುದ್ದುಮನೆ ಇಲ್ಲಿ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಶಸ್ತ್ರ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಊಟ, ವಸತಿ, ವಾಹನ ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು ಎಂದು ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದು, ಅಗತ್ಯವಿರುವವರು ಈ ವ್ಯವಸ್ಥೆಯ ಸದುಪಯೋಗ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಕಲಾಕ್ಷೇತ್ರ-ಕುಂದಾಪುರ, ದೈವಜ್ಞ ಯುವಕ ಮಂಡಲ (ರಿ) ಕುಂದಾಪುರ, ಚಿನ್ನ, ಬೆಳ್ಳಿ ಕೆಲಸಗಾರರ ಸಂಘ (ರಿ) ಕುಂದಾಪುರ, ಪ್ರೆಂಡ್ಸ್ ಸರ್ಕಲ್ ಕುಂದಾಪುರ (ರಿ), ದಿ. ಹೆಚ್. ಗಂಗಾಧರ ರಾವ್ (ಕಟ್ ಬೇಲ್ತೂರು) ಅವರ ಸ್ಮರಣಾರ್ಥ ಮಕ್ಕಳು. ಸೇವಾ ಭಾರತಿ ಕುಂದಾಪುರ ತಾಲೂಕು, ರಘುನಾಥ ಮಿತ್ರವೃಂದ ಕುಂದಾಪುರ, ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರು ಈ ಶಿಬಿರಕ್ಕೆ ಸಹಕಾರ ನೀಡಿರುತ್ತಾರೆ.










