ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತಿಚೆಗೆ ಕೋಡಿ ಕನ್ಯಾಣದಲ್ಲಿ ನಡೆದ ಎ.ಆರ್.ಕೆ. ಕ್ರಿಕೆಟರ್ ಪ್ರಾಯೋಜಕತ್ವದಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಾದೇಶಿಕ ಮಟ್ಟದ ಲೀಗ್ ಪಂದ್ಯಾಟದಲ್ಲಿ ರನ್ನರ್ ಅಪ್ ವಿಜೇತರಾದ ಎ.ಆರ್.ಕೆ. ಫ್ರೆಂಡ್ಸ ಸದಸ್ಯರು ತಮ್ಮ ಸ್ವಇಚ್ಛೆಯಿಂದ ಪಡೆದ ಬಹುಮಾನದ ಮೊತ್ತದಲ್ಲಿ ರೂ. 20,000/-ವನ್ನು ಸ್ಥಳೀಯ ವಿದ್ಯಾ ಸಂಸ್ಥೆಯಾದ ಶ್ರೀರಾಮ ಸೇವಾ ಸಂಗಮ ಶಿಶುಮಂದಿರಕ್ಕೆ ಸಹಾಯಧನವನ್ನು ನೀಡುವುದರ ಮುಖೇನ ತಮ್ಮ ಶೈಕ್ಷಣಿಕ ಕ್ಷೇತ್ರದ ಮೇಲಿದ್ದ ಕಾಳಜಿಯೊಂದಿಗೆ ಶ್ರೇಷ್ಠತೆಯನ್ನು ಮೆರೆದಿದ್ದಾರೆ.
ಮೊತ್ತವನ್ನು ಶಿಶುಮಂದಿರದ ಅಧ್ಯಕ್ಷ ಮಹಾಬಲ ಕುಂದರ್ ಮತ್ತು ವ್ಯವಸ್ಥಾಪನ ಸಮಿತಿಯ ಮುಖ್ಯಸ್ಥ ಸುರೇಂದ್ರ ಪೂಜಾರಿಯವರಿಗೆ ಹಸ್ತಾಂತರಿಸಿದರು. ತಂಡದ ಕಪ್ತಾನರಾದ ತನ್ಸರ್ ಮತ್ತು ಮುಖ್ಯ ಆಟಗಾರ ಪ್ರಕಾಶ್ ಕುಂದರ್, ಅನಿಲ್ ಖಾರ್ವಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.











