ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಕೋಟಿ ಸಿಟಿ, ಬ್ರಹ್ಮಾವರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೋಟದ ಶ್ರೀದೇವಿ ಜ್ಯುವೆಲ್ಲರ್ ಸಹಯೋಗದಲ್ಲಿ ದಿ. ಅಚ್ಲಾಡಿ ಮಂಜುನಾಥ ಅಕ್ಸಾಲರ ಪತ್ನಿ ಬನ್ನಾಡಿ ದಿ. ಪದ್ದು ಆಚಾರ್ ಸ್ಮರಣಾರ್ಥ 15ನೇ ವರ್ಷದ ಕಾರ್ಯಕ್ರಮವಾಗಿ ವ್ಯಕ್ತಿ ಚಿತ್ರ ನೋಡಿ’ ಚಿತ್ರ ಬಿಡಿಸುವ ಸ್ಪರ್ಧೆ, ಪ್ರತಿಭಾ ಪುರಸ್ಕಾರ ಮತ್ತು ವಿಕಲಚೇತನರಿಗೆ ಅಶಕ್ತರ ಮನೆ ನಿರ್ಮಾಣಕ್ಕೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಜರಗಿತು.
ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮ ರಾವ್ ಸಹಾಯಧನ ಹಸ್ತಾಂತರಿಸಿ, ಫಲಾನುಭವಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿದ ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ. ನಾಯಕ್, ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರತಿಭೆಗೆ ಅವಕಾಶ ಸಿಕ್ಕಿದಂತಾಗುತ್ತದೆ ಎಂದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಅಪ್ಪಣ್ಣ ಹೆಗ್ಡೆ, ಆಚಾರ್ ಸಹೋದರರ ಕೆಲಸವನ್ನು ಪ್ರಶಂಸಿಸಿದರು. ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ವಿಕಲಚೇತನ ಸಬಲೀಕರಣ ನಿವೃತ್ತ ಸಹಾಯಕ ನಿರ್ದೇಶಕ ಎಂ. ನಿರಂಜನ ಭಟ್, ಲಯನ್ಸ್ ಅಧ್ಯಕ್ಷ ಡಾ. ಎಸ್. ಮೋಹನ್, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆಸವಿತಾ ಪ್ರಕಾಶ್ ಆಚಾರ್, ರೋಟರಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ವಿರಾಡರವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಚೇಂಪಿಯ ಅಧ್ಯಕ್ಷ ಎಂ.ಸುಬ್ರಾಯ ಆಚಾರ್, ಕಾರ್ಯಕ್ರಮ ರೂವಾರಿಗಳಾದ ಸೀತಾರಾಮ್ ಆಚಾರ್, ನಾರಾಯಣ ಆಚಾರ್, ನರಸಿಂಹ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಸಂಜೀವ ಗುಂಡಿ ಕಾರ್ಯಕ್ರಮ ನಿರೂಪಿಸಿದರು.











