ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಕಾರ್ಕಡದ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಪಾರ್ವತಿ ಎಸ್ ಹೊಳ್ಳ ರಂಗ ಮಂಟಪದಲ್ಲಿ ಶನಿವಾರ ಕಾರ್ಕಡ ಗೆಳೆಯರ ಬಳಗದ 34ನೇ ವರ್ಷದ ವಾರ್ಷಿಕೋತ್ಸವದಲ್ಲಿ ಗೆಳೆಯರ ಬಳಗದಲ್ಲಿ 17ವರ್ಷಗಳ ಕಾಲ ಕಾರ್ಯದರ್ಶಿ ಸೇವೆ ಸಲ್ಲಿಸಿದ ಶಿವರಾಮ ಕಾರ್ಕಡ ಕಳೆದ ವರ್ಷ ಕೊವೀಡ್ ನಿಂದ ಮೃತರಾದ ಹಿನ್ನಲ್ಲೆಯಲ್ಲಿ ಅವರ ಪತ್ನಿ ರಾಧಿಕಾ ಇವರಿಗೆ 5ಒಸಾವಿರ ಬಾಂಡ್ ಹಸ್ತಾಂತರಿಸಲಾಯಿತು. ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ ,ಪಟ್ಟಣ ಪಂಚಾಯಿತಿ ಸದಸ್ಯ ಕಾರ್ಕಡ ರಾಜು ಪೂಜಾರಿ, ಕುಂದಾಪುರ ವಕೀಲೆ ಶ್ಯಾಮಲ ಭಂಡಾರಿ , ಕೋಟ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಶಾಲೆಯ ಮುಖ್ಯ ಶಿಕ್ಷಕ ಎನ್ ಪ್ರಭಾಕರ ಕಾಮತ್ ಇದ್ದರು.











