ಕುಂದಾಪುರ ಮಿರರ್ ಸುದ್ದಿ…
ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಇದೇ ಬರುವ ಎಪ್ರಿಲ್ 1 ಮತ್ತು 2ರಂದು ನಡೆಯುವ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವಳದ ಪ್ರಾಂಗಣ ಶುಚಿತ್ವ ಕಾರ್ಯ ಭಾನುವಾರ ನಡೆಯಿತು.
ಕೋಟ ಪಂಚವರ್ಣ ಯುವಕ ಮಂಡಲದ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷ ಸೌರಭ ಕಲಾರಂಗ ಕೋಟ ಇವರುಗಳ ಸಹಯೋಗದೊಂದಿಗೆ 113ನೇ ವಾರದ ಸ್ವಚ್ಛತಾ ಆಂದೋಲದ ಭಾಗವಾಗಿ ದೇವಳನ್ನು ಸ್ವಚ್ಛಗೊಳಿಸಲಾಯಿತು.
ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸದಸ್ಯರಾದ ಬಾಬು ಜಿ, ಕೃಷ್ಣ ದೇವಾಡಿಗ,ದಿನೇಶ್ ಆಚಾರ್ಯ, ಕೋಟ ಗ್ರಾಮಪಂಚಾಯತ್ ಸದಸ್ಯ ಶಿವರಾಮ್ ಶೆಟ್ಟಿ, ದೇವಳದ ಜೀಣೋದ್ಧಾರ ಸಮಿತಿ ಕೋಶಾಧಿಕಾರಿ ಅರುಣಾಚಲ ಮಯ್ಯ ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ವಿಪ್ರ ಮಹಿಳಾ ಬಳಗದ ವನೀತಾ ಉಪಾಧ್ಯ,ಗ್ರಾಮದ ಹಿರಿಯರಾದ ಭಾರತಿ ಮಯ್ಯ,ವಿಷ್ಣುಮೂರ್ತಿ ಮಯ್ಯ, ರಾಜ ಉರಾಳ,ವಸಂತ ಸುವರ್ಣ,ಹರೀಷ್ ಆಚಾರ್ಯ, ಅರ್ಚಕರಾದ ರವಿ ಐತಾಳ್,ರಘುಪತಿ ಭಟ್, ನಾಗಪ್ಪಯ್ಯ ಪ್ರಭು,ಮತ್ತಿತರರು ಉಪಸ್ಥಿತರಿದ್ದರು.











