ಕುಂದಾಪುರ ಮಿರರ್ ಸುದ್ದಿ…
ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿಗೆ ಗ್ರಾಮದ ಹಿರಿಯರಾದ ಭಾರತಿ ವಿಷ್ಣುಮೂರ್ತಿ ಮಯ್ಯ ಇವರು ಶ್ರೀ ದೇವರಿಗೆ ಚಿನ್ನದ ಲೆಪಿತ ಮುಖವಾಡ ಹಾಗೂ ಬ್ರಹ್ಮಕಲಶದ ಅನ್ನಪ್ರಸಾದಕ್ಕೆ 20ಸಾವಿರ ನಗದು ರೂ ಅನ್ನು ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್‍ಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಳದ ಟ್ರಸ್ಟಿಗಳಾದ ಅಚ್ಯುತ್ ಹಂದೆ,ದಿವ್ಯ ಪ್ರಭು,ಜಿ.ಬಾಬು,ಸುಫಲ ಜಿ ಶೆಟ್ಟಿ ,ಕೃಷ್ಣ ದೇವಾಡಿಗ, ಗ್ರಾಮದ ಪ್ರಮುಖರಾದ ಎಂ.ಎನ್ ಮಧ್ಯಸ್ಥ,ದೇವಳ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅರುಣಾಚಲ ಮಯ್ಯ,ಕೋಟ ಗ್ರಾಮಪಂಚಾಯತ್ ಸದಸ್ಯ ಶಿವರಾಮ್ ಶೆಟ್ಟಿ, ನಾಗಪ್ಪಯ್ಯ ಪ್ರಭು,ನಿತ್ಯಾನಂದ ಪ್ರಭು,ರಾಜ ಉರಾಳ,ಮಹೇಶ್ ಹೊಳ್ಳ, ಮಹೇಶ್ ಶೆಟ್ಟಿ,ನಾಗರಾಜ ಅಮೀನ್,ಗೋಪಾಲ ಪೈ,ಸಂತೋಷ್ ಸುವರ್ಣ , ನರಸಿಂಹ ತಿಂಗಳಾಯ, ಅರ್ಚಕರಾದ ರವಿ ಐತಾಳ್,ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.











