ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಎ. 19 ಮಂಗಳವಾರ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಮಹಾಪೂಜೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿತು.
ಬೆಳಿಗ್ಗೆ ಮಹಾಗಣಪತಿ ಹವನ, ಮಧ್ಯಾಹ್ನ ಪೂರ್ಣಾಹುತಿ ಬಳಿಕ ವಿಶೇಷ ಮಹಾ ಮಂಗಳಾರತಿ, ರಾತ್ರಿ ಸಂಕಷ್ಟಹರ ಚತುರ್ಥಿ ಮಹಾಪೂಜೆ ದೇವಳದ ಧರ್ಮದರ್ಶಿ ಹೆಚ್. ಬಾಲಚಂದ್ರ ಭಟ್ ಅವರ ನೇತೃತ್ವದಲ್ಲಿ ಜರುಗಿತು. ನಂತರ ಅನ್ನಸಂತರ್ಪಣೆ ನಡೆಯಿತು.

ಉತ್ಸವದ ಅಂಗವಾಗಿ ಸಂಜೆ ಮಂಗಳೂರಿನ ಸುರಭಿ ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್‍ನ ವಿನಾಯಕ ಹೆಗಡೆ ಶಿರಸಿ ಅವರಿಂದ ದಾಸವಾಣಿ ಪರಿಸರದಲ್ಲಿ ಭಕ್ತಿ ಭಾವವನ್ನು ಮೇಳೈಸುವಂತೆ ಮಾಡಿತು. ತಬಲಾದಲ್ಲಿ ರಾಜೇಶ್ ಭಾಗವತ್, ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಸಾಥ್ ನೀಡಿದರು.











