ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ವರಸಿದ್ದಿ ಶ್ರೀ ವಿನಾಯಕ ದೇವಸ್ಥಾನದ ಸನ್ನಿದಾನದಲ್ಲಿ15ನೇ ವರ್ಷದ ವರ್ಧಂತ್ಯೋತ್ಸವ ಎ.20 ಬುಧವಾರ ವಿಜೃಂಭಣೆಯಿಂದ ನಡೆಯಿತು. ಲೋಕ ಕಲ್ಯಾಣಕ್ಕಾಗಿ 1108 ಕಾಯಿಗಳ ಸಹಸ್ರ ನಾಳಿಕೇರ, ಮಹಾಗಣಪತಿ ಯಾಗ ನಡೆಯಿತು.
VIDEO:-

ಬೆಳಿಗ್ಗೆಯಿಂದ ಶ್ರೀಗುರು ಗಣಪತಿ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಋತ್ವಿಕ ವರ್ಣೆ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ಬ್ರಹ್ಮಕಲಾಶಭಿಷೇಕ ಹಾಗೂ ಅಷ್ಟೋತ್ತರ ಶತಾಧಿಕ, ಮಹಾ ಪೂಜೆ, ಕಳಶಾಭೀಷೇಕ, ತೀರ್ಥಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಕೆರಾಡಿ ವರಸಿದ್ದಿ ಶ್ರೀ ವಿನಾಯಕ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಉದ್ಯಮಿ ಆನಂದ್ ಸಿ ಕುಂದರ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಬೆಳ್ವೆ ಗಣೇಶ್ ಕಿಣಿ, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್ , ಆಜ್ರಿ ಶನೀಶ್ವರ ದೇವಳದ ಧರ್ಮದರ್ಶಿ ಅಶೋಕ್ ಶೆಟ್ಟಿ, ಮಾಜಿ ಜಿ.ಪಂ ಸದಸ್ಯ ಬಾಬು ಹೆಗ್ಡೆ, ಪ್ರಮುಖರಾದ ವಸಂತ್ ಬೆಳ್ವೆ, ವಿಜಯ್ ಕುಮಾರ್ ಶೆಟ್ಟಿ ಬೆಳ್ವೆ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ ಇದ್ದರು.











