ಕ್ರೀಡೆಯ ಮೂಲಕ ಇಡೀ ಸಮಾಜವನ್ನು ಒಂದುಗೂಡಿಸುವ ಕಾರ್ಯ ಶ್ಲಾಘನೀಯ :ಗ್ರಹ ಸಚಿವ ಅರಗ ಜ್ಞಾನೇಂದ್ರ

0
1240

Click Here

Click Here

ದೇವಾಡಿಗರ ಕ್ರೀಡಾಕೂಟ : ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕ್ರೀಡೆಯ ಮೂಲಕ ಇಡೀ ಸಮಾಜವನ್ನು ಒಂದುಗೂಡಿಸುವ ಕಾರ್ಯ ಶ್ಲಾಘನಾರ್ಹವಾದುದು. ಕ್ರೀಡಾಕೂಟದ ಮೂಲಕ ಸಮಾಜದ ಬಾಂಧವ್ಯ ಇನ್ನಷ್ಟು ಶಕ್ತಶಾಲಿಯಾಗಲಿ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ದೇವಾಡಿಗ ಸಮಾಜ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಕರ್ನಾಟಕ ಸರ್ಕಾರ ಗ್ರಹ ಸಚಿವರಾದ ಅರಗ ಜ್ಞಾನೇಂದ್ರ ಹೇಳಿದರು.

ಕುಂದಾಪುರ ಗಾಂಧಿ ಮೈದಾನದಲ್ಲಿ ಸುರೇಶ್ ಡಿ.ಪಡುಕೋಣೆ ಇವರ ಸವಿನೆನಪಿನಲ್ಲಿ ನಡೆಯುತ್ತಿರುವ ಬೈಂದೂರು ವಲಯದ ದೇವಾಡಿಗ ಸಮಾಜ ಬಾಂಧವರಿಗಾಗಿ ದೇವಾಡಿಗರ ಕ್ರೀಡಾಕೂಟ-2022 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Click Here

ತೀರ್ಥಹಳ್ಳಿ ಭಾಗದಲ್ಲಿ ದೇವಾಡಿಗ ಸಮಾಜ ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾದವರು. ಈ ಸಮಾಜದ ಅವಶ್ಯಕತೆಗಳಿಗೆ ಸ್ಪಂದನೆ ನೀಡುತ್ತೇನೆ. ಸುರೇಶ್ ಡಿ.ಪಡುಕೋಣೆ ಇವರ ಸವಿನೆನಪಿನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದರು.

ಈ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ದೇವಾಡಿಗ ಕ್ರೀಡಾಕೂಟ ಸಮಿತಿ-2022ರ ಅಧ್ಯಕ್ಷರಾದ ಎನ್.ರಮೇಶ ದೇವಾಡಿಗ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಎಲ್.ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ.ಪಡುಕೋಣೆ, ಏಕನಾಥೇಶ್ವರಿ ಟ್ರಸ್ಟ್‍ನ ವಿಶ್ವಸ್ಥರಾದ ರಘುರಾಮ ದೇವಾಡಿಗ, ಗಣೇಶ ದೇವಾಡಿಗ, ಶ್ರೀನಿವಾಸ ದೇವಾಡಿಗ, ಚಂದ್ರಶೇಖರ ದೇವಾಡಿಗ, ತೀರ್ಥಳ್ಳಿ ದೇವಾಡಿಗ ಸಮಾಜದ ಪ್ರಮುಖರಾದ ಸಂತೋಷ್ ದೇವಾಡಿಗ, ಗಣೇಶ ದೇವಾಡಿಗ, ಸದಾನಂದ ಮೊದಲಾದವರು ಉಪಸ್ಥಿತರಿದ್ದರು.

ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿ, ಎನ್.ರಮೇಶ ದೇವಾಡಿಗ ವಂದಿಸಿದರು. ಪತ್ರಕರ್ತರಾದ ಕೆ.ಸಿ ರಾಜೇಶ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here