ಪಾಂಡೇಶ್ವರ- ಬೆಂಕಿಗಾಹುತಿ ಮನೆಗೆ ಆರ್ಥಿಕ ಸಹಾಯಕ್ಕೆ ಮೊರೆ

0
769

Click Here

Click Here

ಧರ್ಮದರ್ಶಿ ಕೆ.ವಿ ರಮೇಶ್ ರಾವ್ ನೇತ್ರತ್ವದಲ್ಲಿ ಅಡಿಪಾಯಕ್ಕೆ ಸಿದ್ಧತೆ

ಕುಂದಾಪುರ ಮಿರರ್ ಸುದ್ದಿ…

ಕೋಟ: ಇತ್ತೀಚಿಗೆ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಜ್ಯೋತಿ ರಮೇಶ್ ಎಂಬ ಅಶಕ್ತ ಕುಟುಂಬದ ಮನೆ ವಿದ್ಯುತ್ ಶಾರ್ಟಸಕ್ರ್ಯೂಟ್ ನಿಂದ ಬೆಂಕಿಗಾಹುತಿ ಪಡೆಯಿತು.ಆದರೆ ಆ ಮನೆ ಭಾಗಶ ಬೆಂಕಿಗಾಹುತಿ ಪಡೆಯಿತು ಆದರೆ ಅಲ್ಲಿ ವಾಸ್ತವ್ಯವಿದ್ದ ತಾಯಿ ಮಗನ ರಕ್ಷಣೆಗೆ ನಿಲ್ಲುವರು ಯಾರು ಎನ್ನುವ ವಿಚಾರ ಪ್ರಚಲಿತಗೊಂಡಾಗ ಅದೇ ಪರಿಸರದ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ತಾವೇ ಸ್ವತಃ ಮುಂದೆ ಬಂದು ಆ ಮನೆಯ ನವೀಕರಣದ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅದರಂತೆ ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾಮಂಡಳ,ರಕ್ತೇಶ್ವರಿ ಬಳಗ,ಹಂದಟ್ಟು ಮಹಿಳಾ ಬಳಗದ ಮೂಲಕ ಶ್ರಮದಾನ ಹಮ್ಮಿಕೊಂಡು ಬೆಂಕಿಗಾಹುತಿ ಪಡೆದ ಮನೆಯನ್ನು ತೆರವುಗೊಳಿಸಲಾಯಿತು.

Click Here

ಕೆಲವೆ ತಿಂಗಳುಗಳಲ್ಲಿ ಮನೆ ನವೀಕರಣಗೊಳ್ಳಲಿದ್ದು ಆ ಅಶಕ್ತ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕೆ ಕೈಜೋಡಿಸಲಿಚ್ಛಿಸುವವರು ಈ ಖಾತೆಗೆ ಹಣ ಜಮಾವಣೆ ಮಾಡಬಹುದಾಗಿದೆ ಎಂದು ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ತಿಳಿಸಿದ್ದಾರೆ.

ಬ್ಯಾಂಕ್ ಖಾತೆ ಹೆಸರು ಜ್ಯೋತಿ -ಕರ್ಣಾಟಕ ಬ್ಯಾಂಕ್ ಐರೋಡಿ ಸಾಸ್ತಾನ
ಖಾತೆ ನಂ.003500100916301
KARB0000003
MOB-7795207031

Click Here

LEAVE A REPLY

Please enter your comment!
Please enter your name here