ಸಿದ್ದಾಪುರ: 25 ಕೋಟಿ ವ್ಯಚ್ಚದ ವಿದ್ಯಾರ್ಥಿಗಳ ವಸತಿ ಶಾಲೆಗೆ ಶಂಕುಸ್ಥಾಪನೆ

0
924

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗ್ರಾಮೀಣ ಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ಸಿದ್ದಾಪುರದಲ್ಲಿ ನವ ಮಾದರಿಯಲ್ಲಿ ಸುಮಾರು ರೂ. 25 ಕೋಟಿ ವ್ಯಚ್ಚದಲ್ಲಿ ವಿದ್ಯಾರ್ಥಿಗಳ ವಸತಿ ಶಾಲೆ ನಿರ್ಮಾಣವಾಗಲಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ಗ್ರಾಮದ ಮೇಲ್ಜೇಡು ಎಂಬಲ್ಲಿ ವಸತಿ ಶಾಲೆಗೆ ಬುಧವಾರ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದರು.

ಬೈಂದೂರು ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಾಕಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ ಸುಮಾರು ರೂ. 1200 ಕೋಟಿ ಅನುದಾನ ತರಲಾಗಿದೆ. ಇದರಲ್ಲಿ ಸುಮಾರು ರೂ. 600 ಕೋಟಿ ನೀರಾವರಿ ಯೋಜನೆಗೆ ಇಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಸಮಗ್ರ ನೀರು ಓದಗಿಸುವ ಸಂಕಲ್ಪ ಹೊಂದಲಾಗಿದೆ. ರೂ. 85 ಕೋಟಿ ವ್ಯಚ್ಚದಲ್ಲಿ ಸೌಕೂರು ಏತ ನೀರಾವರಿ ಕಾಮಗಾರಿ ನಡೆಯುತ್ತಿದೆ. ಸಿದ್ದಾಪುರ ವಾರಾಹಿ ಏತ ನೀರಾವರಿಗೆ ಸುಮಾರು ರೂ. 125 ಕೋಟಿ ಅನುದಾನ ಮಂಜೂರಾಗಿದೆ. ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ 8 ಕೆರೆಗಳ ಅಭಿವೃದ್ದಿಗಾಗಿ ನಾರೇಗ ಯೋಜನೆಯಲ್ಲಿ ಅನುದಾನ ಬರಲಿದೆ ಎಂದರು.

Click Here

ಬೆಳಕು ಯೋಜನೆಯ ಮೂಲಕ ಎಲ್ಲಾ ಮನೆಗಳಿಗೆ ಬೆಳಕು ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಡೀಮ್ಡ್ ಫಾರೇಸ್ಟ್ ಸಮಸ್ಯೆ ಕೆಲವೇ ತಿಂಗಳಲ್ಲಿ ಕ್ಲಿಯರ್ ಆಗಲಿದೆ. ಅಲ್ಲದೆ ಅಕ್ರಮ ಸಕ್ರಮ ಕೂಡ ಜಾರಿಗೆ ಬರಲಿದೆ ಎಂದರು.

ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಶೇಖರ ಕುಲಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅ„ಕಾರಿಗಳ ಗೊಂದಲದ ನಡೆಯಿಂದಾಗಿ ವಸತಿ ಶಾಲೆಯ ಕಟ್ಟಡದ ಕಾಮಗಾರಿ ಮುಂದಕ್ಕೆ ಹೋಗಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದಾಗಿ ಇಂದು ಸಿದ್ದಾಪುರದಲ್ಲಿ ವಸತಿ ಶಾಲೆಗೆ ಶಂಕುಸ್ಥಾಪನೆ ನೆರವೇರಿದೆ ಎಂದರು.

ಉಳ್ಳೂರು-74 ಗ್ರಾ.ಪಂ. ಅಧ್ಯಕ್ಷ ರಾಜೇಶ ಹೆಬ್ಬಾರ್, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಪೂಜಾರಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎಇಇ ರಾಮು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅ„ಕಾರಿ ದೂದ್‍ಫೀರ್, ಮ್ಯಾನೇಜರ್ ರಮೇಶ ಕುಲಾಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರಾಘವೇಂದ್ರ ವರ್ಣೀಕರ್, ಗುತ್ತಿಗೆದಾರ ಸದಾನಂದ ಶೆಟ್ಟಿ ಕೋಟೇಶ್ವರ, ಜಿ.ಪಂ. ಮಾಜಿ ಸದಸ್ಯ ರೋಹಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಸ್ತುತ ವಸತಿ ಶಾಲೆಯು 4.12 ಎಕರೆ ವಿಸ್ತ್ರೀಣದಲ್ಲಿ ನಿರ್ಮಾಣಗೊಳ್ಳಲಿದೆ. ನರಸಿಂಹ ಕುಲಾಲ ಅವರ ವಶದಲ್ಲಿದ್ದ ಜಾಗವನ್ನು ವಸತಿ ಶಾಲೆಗೆ ಬಿಟ್ಟುಕೊಟ್ಟ ಹಿನ್ನಲೆಯಲ್ಲಿ ಅವರನ್ನು ಶಾಸಕರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ 29 ಮಂದಿಗೆ ಬಸವ ವಸತಿ ಯೋಜನೆಯ ಹಕ್ಕುಪತ್ರ ವಿತರಿಸಿದರು.

ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅ„ಕಾರಿ ಮಹಾದೇವ ಎಸ್.ಎನ್., ಸ್ವಾಗತಿಸಿದರು. ಸಿಬಂದಿ ಉದಯ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here