ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನ ಕುಂದಬಾರಂದಾಡಿ ಗ್ರಾಮದ ಬಾರಂದಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿಲಾದೇಗುಲ ಲೋಕಾರ್ಪಣೆ, ನೂತನ ಬಿಂಬಗಳ ಪುನಃ ಪ್ರತಿಷ್ಠೆ ಹಾಗೂ ಸಹಸ್ರ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಿಮಿತ್ತ ಏ.25ನೇ ಸೋಮವಾರದಿಂದ ಏ.27 ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರುಗಿದೆ.

ಮೂರು ದಶಕಗಳ ಇತಿಹಾಸ ಹೊಂದಿರುವ ಕುಂದಾಪುರ ತಾಲೂಕು ಕುಂದಬಾರಂದಾಡಿ ಗ್ರಾಮದ ಬಾರಂದಾಡಿಯಲ್ಲಿ ಶ್ರೀ ಮಹಾಲಿಂಗೇಶ್ವರ ಹಾಗೂ ಪರಿವಾರ ದೇವಸ್ಥಾನ ಶಿಥೀಲಗೊಂಡಿದ್ದು ಊರ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಲ್ಲಿ ಜೀರ್ಣೋದ್ಧಾರ ಸಮಿತಿಯ ಮುಂದಾಳತ್ವದಲ್ಲಿ
ನೂತನ ಶಿಲಾ ದೇಗುಲ ಲೋಕಾರ್ಪಣೆ ಮತ್ತು ನೂತನ ಬಿಂಬಗಳ ಪುನಃ ಪ್ರತಿಷ್ಠೆ ಹಾಗೂ ಸಹಸ್ರ ಕುಂಭಾಭಿಷೇಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದೆ.
ಮೊದಲ ದಿನವಾದ ಸೋಮವಾರದಂದು ಬೆಳಿಗ್ಗೆ ಗಂಟೆ 7-00ರಿಂದಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದೀ, ಮಾತೃಕಾ ಪೂಜನ, ಮಧುಪರ್ಕಪೂಜೆ, ಕೌತುಕ ಬಂಧನ, ಋತ್ವಿಕ್ಟರಣೆ, ಮಹಾಗಣಪತಿಹೋಮ, ನವಗ್ರಹಯಾಗ, ಬಿಂಬಶುದ್ಧಿ, ಕೂಪ ಶಾಂತಿ. ಸಂಜೆ ಗಂಟೆ : 4-00ರಿಂದ ಗೇಹ ಪ್ರತಿಗ್ರಹ, ಸ್ಥಾನ ಶುದ್ಧಿ ಹೋಮ, ಪ್ರಾಸಾದ ಶುದ್ಧಿ, ರಾಕ್ಷಿಘ್ನಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ದಿಶಾಹೋಮ, ಬಿಂಬಸಪ್ತಾಧಿವಾಸ, ಬಿಂಬಶುದ್ಧಿಹೋಮ, ಕಲಶ ಸ್ನಪನಾಧಿವಾಸಹೋಮ, ಮಂಟಪ ಸಂಸ್ಕಾರ, ಶಯ್ಯಾಧಿವಾಸ, ಬಿಂಬೇಧ್ಯಾನಾಧಿವಾಸ ಪೂಜೆ, ಅಗ್ನಿ ಜನನ ಹೋಮ, ನಿದ್ರಾಕುಂಭ ಸ್ಥಾಪನಾ, ವಿದ್ಯೆಶ ಕಲಶ ಸ್ಥಾಪನ, ಉಪಹಾರ ದ್ರವ್ಯಾಣಿ, ಅಷ್ಟಮಂಗಲ ದ್ರವ್ಯಾಣಿ, ಬಿಂಬಸ್ಯ ಜಲೋದ್ಧಾರ, ಬಿಂದೇ ಕೌತುಕ ಬಂಧನ, ಭದ್ರಕ ಮಂಡಲ ಪೂಜಾ, ಪೀಠಾಧಿವಾಸ ಪೂಜೆ, ಪ್ರತಿಷ್ಟಾಂಗ ತತ್ವಹೋಮ, ಪ್ರತಿಷ್ಠಾ ಹೋಮ, ಅಧಿವಾಸ ಹೋಮ, ಶಾಂತಿಹೋಮ, ಪೀಠಾಧಿವಾಸ ಹೋಮ, ನಪುಂಸಕ ಶಿಲಾಧಿವಾಸ ಹೋಮ, ಪ್ರಾಸಾದಾಧಿಹೋಮ, ರತ್ನನ್ಯಾಸ ಹೋಮ, ಅಷ್ಟಬಂಧ, ಅಧಿವಾಸ ಹೋಮ, ಶಕ್ತಿಹೋಮ, ಶಿಖರ ಕಲಶಾಧಿವಾಸ ಹೋಮ.
25-04-2022ನೇ ಸೋಮವಾರ ಬೆಳಗಾದ್ರೆ ಮಂಗಳವಾರ ಬ್ರಾಹೀ ಮುಹೂರ್ತ 5-25ಕ್ಕೆ ಮೀನ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವ, ಅಷ್ಠಬಂಧನ್ಯಾಸ, ಜೀವಕುಂಭಾಭಿಷೇಕ, ಮಹಾಪ್ರಾಣ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ. 26-04-2022ನೇ ಮಂಗಳವಾರ ಬೆಳಿಗ್ಗೆ ಗಂಟೆ 8-00ಕ್ಕೆ ತತ್ವಕಲಶಸ್ಥಾಪನೆ, ತತ್ವಹೋಮ, ಶಾಂತಿಹೋಮ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ಮಹಾಪೂಜೆ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ 4-00ಕ್ಕೆ ಸಹಸ್ರ ಕಲಶಪೂರ್ವಕ ಬ್ರಹ್ಮಕುಂಭಸ್ಥಾಪನೆ, ಅಧಿವಾಸಹೋಮ, ಅಷ್ಟಾವಧಾನ ಸೇವೆ, ರಾತ್ರಿ ಗಂಟೆ 7-00ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಂತರ ಬೆಸ್ಟ್ ಗಾಯ್ಸ್ ಡ್ಯಾನ್ಸ್ ಕ್ರೀವ್ ನಾಡ-ಗುಡ್ಡೆಯಂಗಡಿಯವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಏ.27 ಬುಧವಾರ ಬೆಳಿಗ್ಗೆ ಗಂಟೆ 7-00ರಿಂದ ಪೂರ್ಣಾಹುತಿ, ಸಹಸ್ರಕಲಶಾಭಿಷೇಕ ಪೂರ್ವಕ ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ, ಮಹಾಮಂತ್ರಾಕ್ಷತೆ, ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಿತು.
ಈ ಸಂದರ್ಭ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆಗಮಿಸಿ ದೇವರ ದರ್ಶನ ಪಡೆದರು. ಈ ವೇಳೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಮಗೆ ಮೊದಲಾದವರು ಇದ್ದರು.
ಇಂದು (ಏ.27) ಸಂಜೆ ಗಂಟೆ 6-00ಕ್ಕೆ ಮಹಾರಂಗ ಪೂಜೆ, ತೀರ್ಥ ಪ್ರಸಾದ ವಿತರಣೆ ರಾತ್ರಿ ಗಂಟೆ 7-00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗ ದೆವಸ್ಥಾನಕ್ಕೆ ಧನಸಹಾಯ ನೀಡಿದವರನ್ನು ಗೌರವಿಸುವುದು. ರಾತ್ರಿ 9 ಗಂಟೆಗೆ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಅವರಿಂದ ನೂತನ ಪ್ರಸಂಗ ಆಡಿಸಿ ತೋರಿಸಲಿದ್ದಾರೆ.











