ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಅಂಗವಾಗಿ ಸಾಸ್ತಾನ ರೋಟರಿ ಭವನದಲ್ಲಿ ಪತ್ರಕರ್ತರೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮ ಸೋಮವಾರ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸೇರಿದಂತೆ ಪತ್ರಕರ್ತ ಪ್ರತಿನಿಧಿಗಳಾದ ಶೇಷಗಿರಿ ಭಟ್,ಚಂದ್ರಶೇಖರ ಬೀಜಾಡಿ ,ರವೀಂದ್ರ ಕೋಟ ಇವರುಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ವಲಯ 3ರ ಸಹಾಯಕ ಗವರ್ನರ್ ಕೆ.ಪದ್ಮನಾಭ ಕಾಂಚನ್,ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಉಪಾಧ್ಯಕ್ಷೆ ಸುಲತಾ ಹೆಗ್ಡೆ,ರೋಟರಿ ವೃತ್ತಿಪರ ಸೇವಾ ನಿರ್ದೇಶಕ ಆನಂದ್ ಎಂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಸ್ವಾಗತಿಸಿ ನಿರೂಪಿಸಿದರು.











