ಮಾರ್ಗೋಳಿ : ಶ್ರೀ ಶನೀಶ್ವರ ದೇವಸ್ಥಾನ 10ನೇ ಪ್ರತಿಷ್ಠಾ ವರ್ಧಂತಿ ಉತ್ಸವ

0
526

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಸ್ರೂರು ಮಾರ್ಗೋಳಿಯ ಶ್ರೀ ಶನೀಶ್ವರ ದೇವಸ್ಥಾನದಲ್ಲಿ ಶ್ರೀ ಚೆನ್ನಬಸವೇಶ್ವರ ದೇವರ ಮತ್ತು ಶ್ರೀ ಶನೀಶ್ವರ ದೇವರ ಹಾಗು ಪರಿವಾರ ಗಣಗಳ 10ನೇ ಪ್ರತಿಷ್ಠಾ ವರ್ಧಂತಿ ಉತ್ಸವ ಮೇ.6 ರಿಂದ 8ರ ತನಕ ನಡೆಯಲಿದೆ.

Click Here

ಮೇ.6 ರಂದು ಬೆಳಿಗ್ಗೆ 9 ಗಂಟೆಯಿಂದ ಶ್ರೀ ಚೆನ್ನಬಸವೇಶ್ವರ ದೇವರಿಗೆ ನವಕಪ್ರಧಾನ ಕಲಶ ಮತ್ತ ಆಧಿವಾಸಹೋಮ, ಕಲಶಾಭಿಷೇಕ, ಮಹಾಪೂಜೆ, ಶ್ರೀ ನಾಗಯಕ್ಷೀ, ಗಣಮಣಿ ಮತ್ತು ಪರಿವಾರ ಗಣಗಳಿಗೆ ನವಕುಂಭ ಸ್ಥಾಪನೆ, ಅಧಿವಾಸ ಹೋಮ, ಕಲಶಾಭಿಷೇಕ ಹಾಗೂ ಮಹಾಪೂಜೆ, ಶ್ರೀ ವೀರ ಕಲ್ಲುಕುಟ್ಟಿಗ ದೈವದ ಸಾನಿಧ್ಯದಲ್ಲಿ ನವಕುಂಭ ಸ್ನಪನಾದಿವಾಸ ಹೋಮ, ಕಲಶಾಭೀಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7 ಗಂಟೆಯಿಂದ ಶ್ರೀ ಶನೀಶ್ವರ ದೇವರ ಮತ್ತು ನವಗ್ರಹ ದೇವರುಗಳ ಸನ್ನಿಧಿಯಲ್ಲಿ ದ್ರವ್ಯ ಸಹಿತ ಅಷ್ಟೋತ್ತರ ಶತಕಲಶಾರಾಧನೆ, ತತ್ವ ಕಲಾ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ವೇ.ಮೂ. ವಕ್ವಾಡಿ ಸುಬ್ರಹ್ಮಣ್ಯ ಐತಾಳರ ಆಚಾರ್ಯತ್ವದಲ್ಲಿ ನಡೆಯಲಿದೆ.

ಮೇ.7ರಂದು ಶನಿವಾರ ಬೆಳಿಗ್ಗೆ10-30ಕ್ಕೆ ನಾಗಯಕ್ಷಿ ನುಡಿ, ಸ್ವಾಮಿ ನುಡಿ, ಸರ್ವ ಗಣಗಳ ನುಡಿ, ಸ್ವಾಮಿ ಕೊರಗಜ್ಜರ ನುಡಿ, ಭಕ್ತಾದಿಗಳಿಂದ ಹರಕೆ ಸಮರ್ಪಣೆ, ತುಲಾಭಾರ ಸೇವೆ, ಉರುಳು ಸೇವೆ, ತೀರ್ಥಸ್ನಾನ ಸೇವೆ ನಡೆಯಲಿದೆ. ಸ್ವಾಮಿಗೆ ಬಿಲ್ಲು ಬಾಣ ಕೊಡುಗೆ. ಕಲ್ಲುಕುಟ್ಟಿಗನಿಗೆ ಬೆಳ್ಳಿ ಖಡ್ಗ ಕೊಡುಗೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 12-30ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 7 ಗಂಟೆಯಿಂದ ಶ್ರೀ ನಾಗಯಕ್ಷಿ ಕಲ್ಲು ಕುಟ್ಟಿಗ ಪಂಜುರ್ಲಿ ಮತ್ತು ಪರಿವಾರ ದೈವಗಳ ಧರ್ಮ ನೇಮೋತ್ಸವ (ಕೋಲ ಸೇವೆ) ನಡೆಯಲಿದೆ.

ಮೇ.8ರಂದು 10ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರರಾದ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮನೋರಂಜನಾ ಕಾರ್ಯಕ್ರಮವಾಗಿ ಅಮೆಜಿಂಗ್ ಸ್ಟೇಪರ್‍ಸ್ ಟ್ಯಾನ್ಸ್ ಕ್ರೀವ್ ಕಂಚುಗೋಡು ಇವರಿಂದ ಡ್ಯಾನ್ಸ್ ಕಾರ್ಯಕ್ರಮ, ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಾಟಕ ಕಣ್ಣಾ ಮುಚ್ಚಾಲೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಹಾಲಿಂಗ ಮಾರ್ಗೋಳಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here