ಸಾಲಿಗ್ರಾಮ- ಹಂದಟ್ಟು ಪರಮೇಶ್ವರ ಬಾಸ್ರಿಯವರಿಗೆ ನುಡಿನಮನದ ಮೂಲಕ ಶ್ರದ್ಧಾಂಜಲಿ ಸಮರ್ಪಣೆ.

0
562

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಸಮಾಜದಲ್ಲಿ ಅಗತ್ಯ ಉಳ್ಳವರಿಗೆ ಆಸರೆಯಾದ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್ ಕೂಟ ಬಂಧುಗಳ ಅಭ್ಯುದಯಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಚೇತನ ಹಂದಟ್ಟು ಪರಮೇಶ್ವರ ಬಾಸ್ರಿಯವರು. ಅವರ ಅಗಲಿಕೆ ದೊಡ್ಡ ನಿರ್ವಾತ ಸೃಷ್ಟಿಸಿದೆ. ಫೌಂಡೇಶನ್ ನ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಿ, ಸಮಾಜ ಬಾಂಧವರಿಗೆ ನೆರವಾಗುವುದೇ ನಾವು ಬಾಸ್ರಿಯವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳ ಸಮಿತಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಹೇಳಿದರು.

ಇತ್ತೀಚೆಗೆ ನಿಧನರಾದ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್‍ನ ನಿಕಟಪೂರ್ವ ಅಧ್ಯಕ್ಷ ಹಂದಟ್ಟು ಪರಮೇಶ್ವರ ಬಾಸ್ರಿಯವರಿಗೆ ಕೂಟಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆ ಮತ್ತು ಸಾಲಿಗ್ರಾಮ ಅಂಗಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾದ ನುಡಿನಮನ ಶ್ರದ್ಧಾಂಜಲಿ ಸಭೆಯಲ್ಲಿ ಬಾಸ್ರಿಯವರ ಭಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಎ ಶ್ರೀಪತಿಅಧಿಕಾರಿ ವಹಿಸಿದ್ದರು.

Click Here

ಈ ಸಂದರ್ಭದಲ್ಲಿ ಬಿಲಿಯನ್ ಪೌಂಡೇಶನ್ ಅಧ್ಯಕ್ಷ ಪಿ ಆನಂದರಾಮ ಮಧ್ಯಸ್ಥ,ಕೇಂದ್ರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುರೇಶ್ ತುಂಗ, ಕೇಂದ್ರ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ರಮೇಶ್ ತುಂಗ ,ಕೇಂದ್ರ ಸಂಸ್ಥೆಯ ಅಧ್ಯಕ್ಷ ಹೆಚ್ ಸತೀಶ್ ಹಂದೆ, ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ. ಎಸ್. ಕಾರಂತ, ಬಿಲಿಯನ್ ಪೌಂಡೇಶನ್ ಅಧ್ಯಕ್ಷ ಪಿ ಆನಂದರಾಮ ಮಧ್ಯಸ್ಥ, ಕೇಂದ್ರದ ಸಂಘಟನಾ ಕಾರ್ಯದರ್ಶಿ ರಮೇಶ್ ತುಂಗ, ಕೇಂದ್ರದ ಜಂಟಿ ಕಾರ್ಯದರ್ಶಿ ಸುರೇಶ್ ತುಂಗಾ, ಶ್ರೀ ಗುರುನರಸಿಂಹ ದೇವಳ ಸಮಿತಿಯ ಕಾರ್ಯದರ್ಶಿ ಲಕ್ಶ್ಮೀ ನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ್ ಭಟ್ ಉಪಸ್ಥಿತರಿದ್ದರು.

ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ್ ಉಪಾಧ್ಯ ನಿರೂಪಿಸಿದರು, ಚಿದಾನಂದ ತುಂಗಾ ವಂದಿಸಿದರು.

ಜೂ1 ರಿಂದ ಹಿಡಿದು ಜೂ8 ರವರೆಗೆ ಕೇಂದ್ರ ಸಂಸ್ಥೆಯ ಆಶ್ರಯದಲ್ಲಿ ಸಾಲಿಗ್ರಾಮದಲ್ಲಿ ನಡೆಸಲುದ್ದೇಶಿಸಿರುವ ಶಾಕಲ ಋಕ್ ಸಂಹಿತಾ ಯಾಗದ ಬಗ್ಗೆ ಪೂರ್ವಭಾವಿ ಸಭೆಯು ಕೇಂದ್ರ ಅಂಗಸಂಸ್ಥೆಯ ಅಧ್ಯಕ್ಷ ಹೆಚ್. ಸತೀಶ್ ಹಂದೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Click Here

LEAVE A REPLY

Please enter your comment!
Please enter your name here