ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಅಯುತ ಚಂಡಿಕಾ ಮಹಾಯಾಗ ಸಂಪನ್ನ

0
2675

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಂತ ಅಪರೂಪದ ಶ್ರೀ ಅಯುತ ಚಂಡಿಕಾ ಮಹಾಯಾಗ ಯಶಸ್ವಿಯಾಗಿ ಸಂಪನ್ನಗೊಂಡಿತು.

Click Here

ಮೇ.8ರಂದು ಆರಂಭಗೊಂಡ ಈ ಮಹಾನ್ ಯಾಗ ಏಕಕಾಲದಲ್ಲಿ 100 ಯಾಗಕುಂಡಗಳಲ್ಲಿ ಯಾಗ ಆರಂಭಗೊಂಡಿತು. ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಸೋಮವಾರ ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಮೇ.10 ಮಂಗಳವಾರ ಶ್ರೀ ಅಯುತ ಮಹಾಯಾಗದ ಪೂರ್ಣಾಹುತಿಯೊಂದಿಗೆ ಸಂಪನ್ನ ಕಂಡಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಜ್ಯೋತಿಶಾಸ್ತ್ರ ವಿದ್ವಾನ್ ಶ್ರೀ ಟಿ.ವಾಸುದೇವ ಜೋಯಿಸರ ಧಾರ್ಮಿಕ ಮಾರ್ಗದರ್ಶನ ನೀಡಿದರು. ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್.ಸಚ್ಚಿದಾನಂದ ಚಾತ್ರ, ಅನುವಂಶಿಕ ಧರ್ಮದರ್ಶಿ ಎ.ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ಕಮಲಶಿಲೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಪೂರ್ಣಾಹುತಿಯ ಮಂಗಳವಾರ ಬೆಳಿಗ್ಗೆಯಿಂದ ಭಕ್ತಸಂದಣಿ ನೆರೆದಿತ್ತು. ಉಡುಪಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರ ಸಂದೋಹವೇ ಹರಿದು ಬಂತು.
ಏಕಕಾಲದಲ್ಲಿ ನೂರು ಯಾಗ ಕುಂಡಗಳಲ್ಲಿ ಮೇಲೇದ್ದ ಹೊಗೆ ಗಗನಗಾಮಿಯಾಯಿತು. ಬೃಹತ್ ಯಾಗಶಾಲೆಯ ಯಜ್ಞಕುಂಡಗಳಿಂದ ಸುವಸ್ತುಗಳಿಂದ ಮೇಲೆದ್ದ ಹೊಗೆ ಅಲೆ ಅಲೆಯ ರೀತಿ ಆಕಾಶದ ಬಿಳಿ ಮೋಡಗಳ ಜೊತೆ ಬೆಸೆದುಗೊಂಡ ರೀತಿ ಭಕ್ತಾದಿಗಳ ಕಣ್ಮನ ಸೂರೆಗೊಂಡಿತು.
ಇಡೀ ಯಾಗಶಾಲೆಗೇ ಪ್ರದಕ್ಷಿಣೆ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂ ಸೇವಕರ ತಂಡದ ಸೇವೆ, ದೇವಸ್ಥಾನದ ಸಿಬ್ಬಂದಿಗಳ ವ್ಯವಸ್ಥಿತ ಕಾರ್ಯನಿರ್ವಹಣೆ, ಸ್ಥಳೀಯರ ಸಹಕಾರ, ಭಕ್ತಾದಿಗಳ ಸ್ವಯಂಪ್ರೇರಿತವಾದ ಸೇವೆ ಗಮನ ಸಳೆಯಿತು.

Click Here

LEAVE A REPLY

Please enter your comment!
Please enter your name here