ಕೋಟ ಮೂರ್ತೆದಾರರ ಸಹಕಾರಿ ಸಂಘಕ್ಕೆ ಶಿರಸಿ ರೈತ ನಿಯೋಗ ಭೇಟಿ

0
613

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ: ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಆರಂಭಿಸಲು ಉದ್ದೇಶಿಸಿರುವ ನೀರಾ ಉತ್ಪಾದನಾ ಸಹಕಾರಿ ಸಂಸ್ಥೆಗೆ, ನೀರಾ ಉತ್ಪಾದನೆ ಕುರಿತು, ಕಾರ್ಮಿಕರ ಲಭ್ಯತೆ, ಮಾರಾಟ ವ್ಯವಸ್ಥೆಯ ಕುರಿತು ಸಮಗ್ರ ಚರ್ಚೆ ನಡೆಸಲು ಶಿರಸಿ ರೈತ ನಿಯೋಗ ಕೋಟ ಮೂರ್ತೆದಾರರ ಸಹಕಾರಿ ಸಂಘದ ಕೇಂದ್ರ ಕಛೇರಿ ಕೋಟಕ್ಕೆ ಆಗಮಿಸಿ ಮಾಹಿತಿ ಕ್ರೊಢೀಕರಿಸಿತು.
ನಿಯೋಗದ ನೇತೃತ್ವವನ್ನು ಅಡಿಕೆ ಮತ್ತು ಸಾಂಬಾರ ಬೆಳೆಗಾರರ ಸಂಘ ಶಿರಸಿ ಇದರ ಅಧ್ಯಕ್ಷ ಮಹಾಬಲೇಶ್ವರ ವಿ. ಹೆಗಡೆ ವಹಿಸಿದ್ದರು.

ನಿಯೋಗದಲ್ಲಿ ಶಿರಸಿ ಟಿ.ಆರ್.ಸಿ.ಬ್ಯಾಂಕ್ ಲಿಮಿಟೆಡ್ ಇದರ ಉಪಾಧ್ಯಕ್ಷ ಲೋಕೇಶ ಹೆಗಡೆ, ನೆಲಸಿರಿ ರೈತ ಉತ್ಪಾದಕ ಸಂಸ್ಥೆ ಶಿರಸಿಯ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಹಾಗೂ ನಿರ್ದೇಶಕ ಲಕ್ಷ್ಮಿನಾರಾಯಣ ಹೆಗಡೆ ಉಪಸ್ಥಿತರಿದ್ದರು.

Click Here

ಕೋಟ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಕೆ ಕೊರಗ ಪೂಜಾರಿ ಸ್ವಾಗತಿಸಿದರು. ನೀರಾ ಉತ್ಪಾದನೆ ಹಾಗೂ ಸಹಕಾರ ಸಂಘದ ಮಾಹಿತಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಮತ್ತು ಸಂಘದ ನಿರ್ದೇಶಕ ಜಿ. ಸಂಜೀವ ಪೂಜಾರಿ ಕೋಡಿ ನೀಡಿದರು. ಕೆ. ಕೊರಗ ಪೂಜಾರಿ ಪ್ರಾತ್ಯಕ್ಷಿತೆ ನೀಡಿದರು. ಸಂಘದ ಸಲಹೆಗಾರ ಕೆ. ನಾರಾಯಣ ಪೂಜಾರಿ ಹಂದಟ್ಟು ಉಪಸ್ಥಿತರಿದ್ದರು. ವ್ಯವಸ್ಥಾಪಕ ದಿನೇಶ್ ಪೂಜಾರಿ ಬಾರ್ಕೂರು ವಂದಿಸಿದರು.

Click Here

LEAVE A REPLY

Please enter your comment!
Please enter your name here