ಹಂಗಾರಕಟ್ಟೆಯ ಬಾಳಕುದ್ರು ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ ವಿಜಯಗೋಪುರ ಲೋಕಾರ್ಪಣೆ

0
606

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಹಂಗಾರಕಟ್ಟೆಯ ಶ್ರೀಮಠ ಬಾಳೆಕುದ್ರು ಇದರ ವಿಜಯಗೋಪುರ, ಗುರುಭವನ, ಪಾಕಶಾಲೆ, ಭೋಜನಾಶಾಲೆ ಲೋಕಾಪರ್ಣೆ ಶುಕ್ರವಾರ ಶ್ರೀ ಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯ ಪೂರ್ಣನುಗ್ರಹದೊಂದಿಗೆ ವೇದ ಕೃಷಿಕ ಬ್ರಹ್ಮಶ್ರೀ ನಿತ್ಯಾನಂದ ಸ್ವಾಮೀಜಿಯ ಉಪಸ್ಥಿತಿಯಲ್ಲಿ ಲೋಕಾಪರ್ಣೆಗೊಂಡಿತು.

Click Here

ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದಲ್ಲಿ ಸುಂದರ ಶಿಲಾಮಯ ಗೋಪುರಲೋಕಾಪರ್ಣೆ ಪ್ರಯುಕ್ತ ಅನ್ನಸಂತಪರ್ಣೆ,ವಿವಿಧ ಭಜನಾ ತಂಡಗಳ ನಡುವೆ ಹಾಗೂ ಜ್ಯೋತಿವೀರ ನಾರಾಯಣ ಭಟ್ ಉಡುಪಿ ಇವರು ಬೆಳ್ಳಿ ಮಂಟಪವನ್ನು ಶ್ರೀಮಠಕ್ಕೆ ಹಸ್ತಾಂತರಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾದರು.

ಬಾಳಕುದ್ರು ಶ್ರೀ ಮಠದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಕಲ್ಕೂರ,ಕಾರ್ಯದರ್ಶಿ ಭುಜಂಗ ಶೆಟ್ಟಿ,ಗೌರವ ಸಲಹೆಗಾರರಾದ ಗುಜ್ಜಾಡಿ ಪ್ರಭಾಕರ್ ನಾಯಕ್,ಡಾ.ಕೆ.ಪಿ ಶೆಟ್ಟಿ,ವಿಜಯ ಕುಮಾರ್ ಶೆಟ್ಟಿ ,ಶ್ರೀಮಠದ ವ್ಯವಸ್ಥಾಪಕ ಮಂಜುನಾಥ, ಶ್ರೀ ಮಠದ ಪರಿಚಾರಕ ವಿನಯ್ ಭಟ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು .

14.05 ಶನಿವಾರ ಶ್ರೀಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವ ನಡೆಯಲಿದೆ.

Click Here

LEAVE A REPLY

Please enter your comment!
Please enter your name here