ಹಂಗಳೂರು ಗ್ರಾಮಸ್ಥರಿಂದ ಗ್ರಾ.ಪಂ.ಎದುರು ಪ್ರತಿಭಟನೆ

0
744

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಹಂಗಳೂರು ಗ್ರಾ.ಪಂ. ಮುಖ್ಯ ರಸ್ತೆಯಿಂದ ಸದಾನಂದ ಶೆಟ್ಟಿಯವರ ಮನೆತನಕ ರಸ್ತೆ ಕಾಮಗಾರಿಗೆ ಅನುಮತಿ ದೊರಕಿದ್ದು, ರಸ್ತೆ ಕಾಮಗಾರಿಯನ್ನು ‌ಮುಖ್ಯ ರಸ್ತೆಯಿಂದ ಗಣಪು ದೇವಾಡಿಗ(ಕೊನೆಯ ತನಕ) ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Video :

Click Here

ಮುಖ್ಯ ರಸ್ತೆಯಿಂದ ಸದಾನಂದ ಶೆಟ್ಟಿಯವರ ಮನೆತನಕ ರಸ್ತೆ ಕಾಮಗಾರಿ ಮಾಡಿದರೆ, ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗದೆ ಇಲ್ಲಿನ ಸ್ಥಳೀಯ ಮನೆಗಳಿಗೆ ನೀರು ನಿಂತು ನೇರೆ ಬರುವ ಸಂಭವ ಇದ್ದು, ಶಾಲಾ ಮಕ್ಕಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನಾನುಕೂಲವಾಗುತ್ತದೆ ಎಂದರು.

ರಸ್ತೆಯ ಕಾಮಗಾರಿಯನ್ನು ಮುಖ್ಯ ರಸ್ತೆಯಿಂದ ಗಣಪು ಮನೆಯ ತನಕ ಕಾಮಗಾರಿಯನ್ನು ಮಾಡಬೇಕು, ಇಲ್ಲವಾದ್ದಲ್ಲಿ ಕಾಮಗಾರಿ ನಿಲ್ಲಿಸಬೇಕೆಂದು ಗ್ರಾ.ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ ಹಾಗೂ ಪಂ. ಅಭಿವೃದ್ದಿ ಅಧಿಕಾರಿ ರಾಜೇಶ್ ಅವರಿಗೆ ಮನವಿ ನೀಡಲಾಯಿತು.

ಪ್ರತಿಭಟನೆಯಲ್ಲಿ ಚಂದ್ರ ದೇವಾಡಿಗ, ವಿಶ್ವನಾಥ ದೇವಾಡಿಗ, ಶೇಷಯ್ಯ ಶೇರಿಗಾರ, ರಾಘವೇಂದ್ರ ಶೇರಿಗಾರ್, ನರಸಿಂಹ ಗಾಣಿಗ, ಆನಂದ ಪೂಜಾರಿ, ನಾರಯಣ್ ಮಾಸ್ಟರ್, ಸಂತೋಷ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here