ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುದ್ರುಕೋಡು ಕನಕಗ್ರೂಪ್ ಜಗದೀಶ್ ಶೆಟ್ಟಿ ಮಾಲಕತ್ವದ ಕನಕ ಫ್ಯೂಯಲ್ ಸ್ಟೇಷನ್ ಎನ್.ಎಚ್.66 ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್ ಸಮೀಪ ಶುಕ್ರವಾರ ಜು.3ರಂದು ಶುಭಾರಂಭಗೊಂಡಿತು.

ಬೈಂದೂರು ವಿಧಾನಸಭಾ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ಫ್ಯೂಯಲ್ ಸ್ಟೇಷನ್ ಉದ್ಘಾಟಿಸಿ, ಮುಂಬಯಿಯಲ್ಲಿ ಉದ್ಯಮದ ಮೂಲಕ ಸಾಧನೆ ಮಾಡಿದ ಜಗದೀಶ ಶೆಟ್ಟರು ಊರಿನಲ್ಲಿಯೂ ಉದ್ಯಮ ಆರಂಭಿಸಿ, ಅದರ ಪ್ರಯೋಜನ ತನ್ನ ಊರಿನ ಜನರಿಗೂ ಸಿಗಬೇಕು ಎನ್ನುವ ಯೋಚನೆಯಿಂದ ಆರಂಭಿಸಿರುವ ಈ ಉದ್ಯಮ ಯಶಸ್ವಿಯಾಗಲಿ ಎಂದರು.
ಯಾವುದೇ ಉದ್ಯಮ ಯಶಸ್ಸುಯಾಗಲು ಬುದ್ಧಿಮತ್ತೆ ಇದ್ದರೆ ಸಾಲದು ದೈವಾನುಗ್ರವೂ ಇರಬೇಕು. ಬಾಲ್ಯದಲ್ಲಿ ತಾಯಂದಿರು ನೀಡುವ ಬೋಧನೆ, ಹಿತೋಪದೇಶ ಮುಂದೆ ಸಾಧನೆಗೆ ಸಹಕಾರಿಯಾಗುತ್ತದೆ.
ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಫ್ಯೂಯಲ್ ಸ್ಟೇಷನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಾಗತಿಕ ಬಂಟರ ಸಂಘ ನೊಂದವರ, ಬಡಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಮುಂಬಯಿಯಲ್ಲಿ 18 ಜಾತಿಯ ಜನರು ಎಲ್ಲರೂ ಒಂದೇ ತುಳು ಕನ್ನಡಿಗರು ಎನ್ನುವ ಜಾತಿ. ಸೇವಾ ಚಟುವಟಿಕೆಗಳನ್ನು ಎಲ್ಲರೂ ಒಟ್ಟಾಗಿ ತೊಡಗಿಸಿಕೊಳ್ಳುತ್ತಾರೆ. ಜಗದೀಶ ಶೆಟ್ಟರು ಕೂಡಾ ಮುಂಬಯಿಯಲ್ಲಿ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು.
ಕೋಟ ಜನತಾ ಫಶ್ ಮಿಲ್ & ಆಯಿಲ್ ಪ್ರಾಡಕ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ ಸಿ.ಕುಂದರ್ ಫ್ಯೂಯಲ್ ಸ್ಟೇಷನ್ ಇದರ ಕಛೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗಣಕಯಂತ್ರದ ಕೊಠಡಿಯನ್ನು ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುದ್ರುಕೋಡು ಕನಕಗ್ರೂಪ್ ಸುಮಂಗಲ ಜೆ.ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಮತ್ತು ದಿಶಾರಾಣಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಾಕಟ್ಟೆ, ಕಿರಿಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಗೀತಾ, ಬೈಂದೂರು ಮಂಡಳದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ರಾಜು ಪೂಜಾರಿ ಉಪಸ್ಥಿತರಿದ್ದರು.
ಜಗದೀಶ್ ಶೆಟ್ಟಿ ಸ್ವಾಗತಿಸಿದರು, ಶೆಶಿಧರ್ ಕಾರ್ಯಕ್ರಮ ನಿರೂಪಿಸಿದರು. ವಕ್ವಾಡಿ ಭಾಸ್ಕರ್ ಶೆಟ್ಟಿ ವಂದಿಸಿದರು











