ಕುಂದಾಪುರ : ಹಂಗಳೂರು ರಸ್ತೆಗೆ ಶಾಸಕರಿಂದ ಹೆಚ್ಚುವರಿ ಅನುದಾನ

0
845

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹಂಗಳೂರು ಗ್ರಾ.ಪಂ. ಮುಖ್ಯ ರಸ್ತೆಯಿಂದ ಗಣಪು ದೇವಾಡಿಗ ಅವರ ಮನೆಯವರೆಗೆ ರಸ್ತೆ ಕಾಮಗಾರಿ ಮಾಡಬೇಕು ಎನ್ನುವ ಬೇಡಿಕೆಯ ಹಿನ್ನೆಲೆಯಲ್ಲಿ ಸ್ಪಂದಿಸಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಅದಕ್ಕಾಗಿ ಶಾಸಕರ ನಿಧಿಯಿಂದ ಹೆಚ್ಚುವರಿಯಾಗಿ 12 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಹಂಗಳೂರು ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ ಅವರ ನೇತೃತ್ವದಲ್ಲಿ ಶುಕ್ರವಾರ ಶಾಸಕರನ್ನು ಭೇಟಿಯಾದ ನಿಯೋಗವು ಗ್ರಾಮಸ್ಥರ ಈ ಬೇಡಿಕೆಯನ್ನು ಮುಂದಿಟ್ಟರು. ಇದಕ್ಕೆ ಸ್ಥಳದಲ್ಲೇ ಸ್ಪಂದಿಸಿದ ಶಾಸಕರು, ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದರು.

Click Here

ಮುಖ್ಯ ರಸ್ತೆಯಿಂದ ಸದಾನಂದ ಶೆಟ್ಟಿಯವರ ಮನೆವರೆಗೆ ರಸ್ತೆ ಕಾಮಗಾರಿ ಮಾಡಿದರೆ, ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗದೆ ಇಲ್ಲಿನ ಸ್ಥಳೀಯ ಮನೆ ಕಡೆಗಳಲ್ಲಿ ನೀರು ನಿಂತು ನೆರೆ ಭೀತಿಯಿದೆ. ಶಾಲಾ ಮಕ್ಕಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮುಖ್ಯ ರಸ್ತೆಯಿಂದ ಗಣಪು ಅವರ ಮನೆಯವರೆಗೆ ರಸ್ತೆ ಅಭಿವೃದ್ಧಿ ಮಾಡಬೇಕು ಎನ್ನುವುದಾಗಿ ಆಗ್ರಹಿಸಿ, ಗುರುವಾರ ಗ್ರಾ.ಪಂ. ಎದುರು ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿತ್ತು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಮಂಜು ಬಿಲ್ಲವ, ಹಂಗಳೂರು ಗ್ರಾ.ಪಂ. ಸದಸ್ಯರಾದ ಸ್ಟೀವನ್ ಡಿ’ಕೋಸ್ಟಾ, ಸತೀಶ್ ಶೇರೆಗಾರ್, ಸ್ಥಳೀಯರಾದ ಚಂದ್ರ ದೇವಾಡಿಗ, ವಿಶ್ವನಾಥ ದೇವಾಡಿಗ, ಶೇಷಯ್ಯ ಶೇರಿಗಾರ್, ರಾಘವೇಂದ್ರ ಶೇರಿಗಾರ್, ನರಸಿಂಹ ಗಾಣಿಗ, ಆನಂದ ಪೂಜಾರಿ, ನಾರಾಯಣ್, ಸಂತೋಷ, ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here