ಕುಂದಾಪುರ ಮಿರರ್ ಸುದ್ದಿ…
ಕೋಟ: ಜೇಸಿಐ ಮಡಂತ್ಯಾರ್ ಘಟಕದ ಆತಿಥ್ಯದಲ್ಲಿ ಸೆಕ್ರೇಡ್ ಹಾರ್ಟ್ ಚರ್ಚ್ ಸಭಾಂಗಣ ಮಡಂತ್ಯಾರನಲ್ಲಿ ಜರುಗಿದ ಜೇಸಿವಲಯ 15ರ ಪ್ರಾಂತೀಯ ಸಮ್ಮೇಳನ ‘ ರಂಗೋಲಿಯಲ್ಲಿ ಪ್ರಾಂತ್ಯದ ಅತ್ಯುತ್ತಮ ಜೇಸಿ ಘಟಕ ಪ್ರಶಸ್ತಿ ಹಾಗೂ 18 ಜೇಸಿ ಪುರಸ್ಕಾರಗಳನ್ನು ಜೇಸಿಐ ಕಲ್ಯಾಣಪುರದ ಅಧ್ಯಕ್ಷೆ ಜಯಶ್ರೀ ಮಿತ್ರಕುಮಾರ್ ಜೇಸಿ ವಲಯಾದ್ಯಕ್ಷ ರೋಯನ್ ಉದಯ್ ಕ್ರಾಸ್ತಾರಿಂದ ಸ್ವೀಕರಿಸಿದರು.
ಜೇಸಿಐ ಕಲ್ಯಾಣಪುರ ತನ್ನ ಅಪೂರ್ವ ಕಾರ್ಯಕ್ರಮಗಳ ಮೂಲಕ ಅರ್ಧವರ್ಷದಲ್ಲಿ ಮಾಡಿದ ಸಾಧನೆಗಾಗಿ ಸ್ಪೆಶಲ್ ಪ್ರಾಜೆಕ್ಟ್ ಅವಾರ್ಡ್, ಸಿಲ್ವರ್ ಲೋಮ್, ಡೈಮಂಡ್ ಲೋಮ್ ಅವಾರ್ಡ್, ಮಿನುಗುತಾರೆ, ಸ್ಪಾರ್ಕಿಂಗ್ ಕ್ರಾನ್ ಪುರಸ್ಕಾರ್, ಶಾಶ್ವತಯೋಜನೆ, ತರಭೇತಿ ಕಾರ್ಯಕ್ರಮ, ವ್ಯವಹಾರ, ಸಮುದಾಯ ಅಭಿವೃದ್ಧಿ, ಚಯರ್‍ಮ್ಯಾನ್ ಶಿಪ್ ಆ್ಯಂಡ್ ಪಾರ್ಲಿಮೆಂಟೆರಿಯನ್ ಅವಾರ್ಡ್, ಒಂದು ಘಟಕ ಒಂದು ಯೋಜನೆ, ರಕ್ತದಾನ ಪುರಸ್ಕಾರ, ಉದಕ ಕ್ವಿಜ್, ಅಕ್ಷಯ ರತ್ನ, ಪಂಚರತ್ನ, ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಪುರಸ್ಕಾರಗಳು ದೊರೆತಿರುತ್ತದೆ.
ಪ್ರಶಸ್ತಿ ವಿತರಣಾ ಸಮಾರಂಭದ ವೇದಿಕೆಯಲ್ಲಿ ಜೇಸಿಐ ಫೌಂಡೇಶನ್ ನಿರ್ದೇಶಕ ಅಲನ್ ರೋಹನ್ ವಾಜ್, ವಲಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಜೇಸಿಐ ಕಲ್ಯಾಣಪುರದ ಸ್ಥಾಪಕಾಧ್ಯಕ್ಷ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷ ತುಳಸಿದಾಸ್, ಚಿತ್ರಕುಮಾರ್, ಪ್ರಶಾಂತ್ ಆಚಾರ್ಯ, ಮಿತ್ರಕುಮಾರ್, ಉಮೇಶ್ ಅಮೀನ್, ಆಶಾ ಅಲನ್, ಮಹಿಳಾ ಜೇಸಿ ಸಂಯೋಜಕಿ ಅನಿತಾ ನರೇಂದ್ರ ಕುಮಾರ್, ಕಾರ್ಯದರ್ಶಿ ಅನುಸೂಯ ಅನಿಲ್, ಜೂನಿಯರ್ ಜೇಸಿ ಅಧ್ಯಕ್ಷೆ ರೇಚಲ್, ಉಪಾಧ್ಯಕ್ಷರಾದ ನಿತ್ಯಾನಂದ ನೇಜಾರ್, ಲವೀನಾ ಲೂವಿಸ್, ರೋಹಿಣಿ ಚಿತ್ರಕುಮಾರ್, ಕೋಶಾಧಿಕಾರಿ ಸದಾನಂದ ಸುವರ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.











