ನಾವುಂದ ಸಾಲ್ಬುಡದಲ್ಲಿ ಅತಿವೃಷ್ಟಿ ಅಣಕು ಪ್ರದರ್ಶನ

0
837

Click Here

Click Here

ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ನೆರೆಪೀಡಿತ ಪ್ರದೇಶವಾಗಿರುವ ಬೈಂದೂರು ತಾಲೂಕು ನಾವುಂದ ಗ್ರಾಮದ ಸಾಲ್ಬುಡದ ನದಿತೀರದಲ್ಲಿ ಅತಿವೃಷ್ಟಿಯಿಂದ ನೆರೆ ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ಕಾರ್ಯಗಳು, ಸಾರ್ವಜನಿಕರಿಗೆ ಇಲಾಖೆಯ ರಕ್ಷಣ ಕಾರ್ಯವೈಖರಿಯನ್ನು ಪ್ರಾತ್ಯಕ್ಷಿಕ ರೂಪದಲ್ಲಿ ತೋರಿಸುವ ಸಲುವಾಗಿ ಅಣಕು ಪ್ರದರ್ಶನ ಶನಿವಾರ ತಾಲೂಕು ಆಡಳಿತ, ಅಗ್ನಿಶಾಮಕ ದಳದ ನೇತೃತ್ವದಲ್ಲಿ ನಡೆಯಿತು.

ಅಗ್ನಿಶಾಮಕದಳದ ಕಾರ್ಯಾಚರಣೆ, ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವ್ಯಕ್ತಿಯ ರಕ್ಷಣೆ, ಪ್ರಥಮ ಚಿಕಿತ್ಸೆ ಇತ್ಯಾದಿಗಳ ಪ್ರಾತ್ಯಕ್ಷಿಕೆ ನಡೆಯಿತು. ಸಾಲ್ಬುಡ ನದಿಯಲ್ಲಿ ನೀರಿನ ಇಳಿತ ಇದ್ದಿದ್ದರಿಂದ ಅಣಕು ಪ್ರದರ್ಶನ ಅಷ್ಟೊಂದು ಪರಿಣಾಮಕಾರಿಯಾಗಲಿಲ್ಲ. ಪ್ರತೀ ವರ್ಷ ಮಳೆಗಾಲದಲ್ಲಿ ನಾಲ್ಕಾರು ಬಾರಿ ನೆರೆಗೆ ಈ ಭಾಗ ತತ್ವರವಾಗುತ್ತದೆ.

Click Here

ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ತಹಶೀಲ್ದಾರ್ ಶೋಭಾ ಲಕ್ಷ್ಮಿ, ಮಳೆಗಾಲದಲ್ಲಿ ಪ್ರವಾಹ ಹೆಚ್ಚಿದ್ದಾಗ ಸಮಸ್ಯೆ ಉಂಟಾದ ಸಂದರ್ಭ ಸಾರ್ವಜನಿಕರು ಏನು ಮಾಡಬೇಕು, ಇಲಾಖೆ, ಅಗ್ನಿಶಾಮಕ ದಳದವರು ಹೇಗೆ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎನ್ನುವುದನ್ನು ಸಾರ್ವಜನಿಕರ ಮುಂದೆ ಅಣಕು ಪ್ರದರ್ಶನದ ರೂಪದಲ್ಲಿ ಮಾಡಿ ತೋರಿಸಲಾಗಿದೆ. ಈ ರೀತಿಯಾಗಿ ಜನರಿಗೆ ಮಾರ್ಗದರ್ಶನ ನೀಡಬೇಕು ಎನ್ನುವ ಇಲಾಖೆ ಸೂಚನೆಯಂತೆ ಇವತ್ತು ಈ ಅಣಕು ಪ್ರದರ್ಶನ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಈ ಭಾಗದ ರಸ್ತೆಯ ಭೂ ಮಟ್ಟವನ್ನು ಎತ್ತರಿಸಬೇಕು, ಕುದ್ರುವಿನಿಂದ ಸಂಪರ್ಕ ಸೇತುವೆ ಆಗಬೇಕು. ಸದ್ಯಕ್ಕೆ ತೂಗು ಸೇತುವೆಯನ್ನಾದರೂ ಮಾಡಿಸಿಕೊಡಿ, ಈಗ ಕುದ್ರವಿನ ಜನರಿಗೆ ದೋಣಿಯನ್ನು ನೀಡಿದ್ದು ಅದು ದೊಡ್ಡ ದೋಣಿಯಾಗಿದ್ದು, ಹೊಳೆ ತುಂಬಿ ಹರಿಯುತ್ತಿರುವಾಗ ಬಳಸುವುದು ಕಷ್ಟವಾಗುತ್ತದೆ ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ಮುಂದಿನಮನಿ, ನಾವುಂದ ಗ್ರಾ.ಪಂ.ಅಧ್ಯಕ್ಷೆ ಜಾನಕಿ ಮೊಗವೀರ, ಉಪಾಧ್ಯಕ್ಷೆ ನಿರ್ಮಲ ಶೆಟ್ಟಿ, ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ, ಶಿಕ್ಷಣ ಇಲಾಖೆಯ ವಿಶ್ವನಾಥ ಶೆಟ್ಟಿ, ಗ್ರಾ.ಪಂ.ಸದಸ್ಯರು, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾಕಾರ್ಯಕರ್ತೆಯರು ಸ್ಥಳೀಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here