ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಯುವ ಬಂಟರ ಸಂಘದ ಯುವಕರ ಸಾಧನೆ, ಸೇವೆ ಶ್ಲಾಘನೀಯ. ಕಳೆದ 9 ವರ್ಷಗಳಿಂದ ಎಲ್ಲ ರೀತಿಯ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿದ್ದರೂ, ಕರಾವಳಿಯಲ್ಲಿ ಬಲಿಷ್ಠರಾಗಿಸುವ ಬಂಟ ಸಮಾಜದಲ್ಲಿ ಸಂಘಟನೆ ಶಕ್ತಿ ಇದೆ. ಸಮಾಜದ ಯುವ ಜನತೆ ಐಎಎಸ್ ನಂತಹ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣಹೆಗ್ಡೆ ಹೇಳಿದರು.

ಅವರು ಶನಿವಾರದಂದು ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ) ದಿಂದ ನಡೆದ ದಶಮ ಸಂಭ್ರಮ ಚಾಲನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ ದಶಮ ಕಾರ್ಯಕ್ರಮಕ್ಕೆ ಲಾಂಛನ ಅನಾವರಣ ಮಾಡಿದರು.
ಕುಂದಾಪುರ ಯುವ ಬಂಟರ ಸಂಘದ ಗೌರವಧ್ಯಕ್ಷ ಡಾ.ರಂಜನ್ ಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು. ನಿರ್ಗಮನ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಪ್ರ.ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಬೆಂಗಳೂರು ಬಂಟರ ಸಂಘದ ಕೋಶಾಧಿಕಾರಿ ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು ಆಶಯ ನುಡಿಗಳ್ನಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೊ-ಆಪರೇಟಿವ್ ನಿರ್ದೇಶಕ ಬಿ.ಅರಣ್ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘ ತೋನ್ಸೆ ವಲಯದ ಅಧ್ಯಕ್ಷ ಮನೋಹರ ಶೆಟ್ಟಿ, ಯುವಮೇರೆಡಿಯನ್ ಕೋಟೇಶ್ವರ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಉದಯ ಕುಮಾರ್ ಶೆಟ್ಟಿ, ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘ ಸಹ ಸಂಚಾಲಕ ವಿಕಾಸ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಸಚಿನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜಾರಾಮ್ ಶೆಟ್ಟಿ ಹೈಕಾಡಿ ಪ್ರಾಸ್ತಾವಿಕ ನುಡಿಗಳ್ನಾಡಿದರು. ಮನೋರಾಜ್ ಶೆಟ್ಟಿ ವಂದಿಸಿದರು.
ನೂತನ ಆಯ್ಕೆಯಾದ ಪದಾಧಿಕಾರಿಗಳು: ಗೌರವಾಧ್ಯಕ್ಷರು ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರ.ಕಾರ್ಯದರ್ಶಿ ನತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿ ಅಕ್ಷಯ್ ಹೆಗ್ಡೆ, ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಸಚೀನ್ ಕುಮಾರ್ ಶೆಟ್ಟಿ, ರಾಜೇಶ್ವರಿ ಆರ್ ಹೆಗ್ಡೆ, ಜೊತೆ ಕಾರ್ಯದರ್ಶಿ ಭರತ್ ರಾಜ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸುಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಂತೋಷ ಕುಮಾರ್ ಶೆಟ್ಟಿ, ರಾಜೀವ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಮುರಳೀಧರ ಶೆಟ್ಟಿ, ಪ್ರೀತಿ ಸುನೀಲ್ ಶೆಟ್ಟಿ, ಗೌರವ ಸಲಹೆಗಾರರು ಸುಕೇಶ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ.











