ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಳೇ ವಿದ್ಯಾರ್ಥಿ ಗಳು ಶಾಲೆಯನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಹೇಳಿದರು.

ಶನಿವಾರ ಶಾಂಭವಿ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇಲ್ಲಿ ಉಚಿತ ನೋಟ್ ಪುಸ್ತಕ, ದತ್ತಿನಿಧಿ, ಸಮವಸ್ತ್ರ ವಿತರಣೆ ಹಾಗೂ ಸ್ಕೂಲ್ ಬ್ಯಾಗ್, ಬೆಲ್ಟ್, ಕಲಿಕೋಪಕರಣ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಜಾಗೃತಿಯನ್ನು ಇಂದಿನ ದಿನದಲ್ಲಿ ಪೋಷಕರು ಮಾಡಬೇಕಾಗಿದೆ. ದಾಖಲೆ ಸೃಷ್ಟಿಸಿದ ಆಗಿನ ವಿದ್ಯಾಸಂಸ್ಥೆಯ ಉಳಿವಿಗೆ ಹಳೆ ವಿದ್ಯಾರ್ಥಿಗಳು ಟೊಂಕಕಟ್ಟಿ ಶ್ರಮಿಸಬೇಕಾಗಿದೆ. ಅನುದಾನಿತ ಶಿಕ್ಷಣ ವ್ಯವಸ್ಥೆಯಲ್ಲಿ ಆಂಗ್ಲ ಮಾಧ್ಯಮದ ಅಗತ್ಯತೆಯನ್ನು ಮನಗಾಣಿಸಿದರಲ್ಲದೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವಾ ಎಂದು ಶಾಲೆಯ ಓರ್ವ ಅತಿಥಿ ಶಿಕ್ಷಕರ ಭತ್ತೆಯನ್ನು ತಮ್ಮ ಗೀತಾನಂದ ಫೌಂಡೇಶನ್‍ನಿಂದ ನೀಡುವುದಾಗಿ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಲಿಕೋಪಕರಣವನ್ನು ಶಾಲೆಯ ನಿವೃತ್ತ ಶಿಕ್ಷಕ ಪಿ ನರಸಿಂಹ ಐತಾಳ್, ಸ್ಕೂಲ್ ಬ್ಯಾಗ್‍ನ್ನು ಮಾಲಿನಿ ಶ್ರೀ ಧರ ಮಯ್ಯ, ನೋಟ್ ಪುಸ್ತಕವನ್ನು ಆನಂದ ಸಿ ಕುಂದರ್,ಇಂಗ್ಲಿಷ್ ಕಲಿಕಾ ಪುಸ್ತಕವನ್ನು ಶಾಲಾ ಆಡಳಿತ ಮಂಡಳಿಯ ಸಚಿನ್ ಕಾರಾಂತ್,ಸಮವಸ್ತ್ರವನ್ನು ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜರಾಮ್ ಐತಾಳ್, ದಾನಿಗಳಾದ ಮಾಲಿನಿ ಶ್ರೀಧರ ಮಯ್ಯ,ಜಾನಕಿ ಮಂಜುನಾಥ ಮಯ್ಯ, , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿಂದ್ರ ಜೋಗಿ,ಸೇರಿದಂತೆ ಶಾಲಾ ಅಧ್ಯಾಪಕರು ಸಿಬ್ಬಂದಿ ವರ್ಗದವರು ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ನಿರೂಪಿಸಿದರೆ,ಶಿಕ್ಷಕಿ ಯಶೋಧ ವಂದಿಸಿದರು.ಶಿಕ್ಷಕಿ ವಿನೋದ ವಿಜಯ್ ಸಹಕರಿಸಿದರು.











