ವಿಶ್ವಕರ್ಮ ಸಮುದಾಯ ಮಿಸಲಾತಿಯ ಬಗ್ಗೆ ಹೋರಾಟದ ಹಾದಿ ತುಳಿಯಬೇಕಾದ ಅಗತ್ಯತೆ ಇದೆ – ಕೆ.ಪಿ.ನಂಜುಂಡಿ ವಿಶ್ವಕರ್ಮ

0
675

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ವಿಶ್ವಕರ್ಮ ಸಮಾಜ ಅತಿ ಹಿಂದುಳಿದ ಸಮಾಜವಾಗಿದೆ ನಮ್ಮ ಸಮುದಾಯ ಸರಕಾರಿ ಸೌಲಭ್ಯಗಳಿಂದ ವಂಚಿರಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ,ವಿಧಾನಪರಿಷತ್ ಸದಸ್ಯ ಕೆ.ಪಿ ನಂಜುಡಿ ಹೇಳಿದರು.

ಭಾನುವಾರ ಕೋಟ ಮಾಂಗಲ್ಯ ಮಂದಿರಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೋಟ ಹೋಬಳಿ ಘಟಕ ಇದರ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಸಮಾಜ ಶೋಷಿತ ಸಮಾಜವಾಗಿ ಗುರುತಿಸಿಕೊಂಡಿದೆ ನಮ್ಮಲ್ಲಿ ರಾಜಕೀಯ ಪ್ರಜ್ಞೆ ಸಹ ಕುಂಠಿತಗೊಂಡಿದೆ ಈ ದಿಸೆಯಲ್ಲೆ ಹಿಂದೆ ಉಳಿದುಕೊಂಡಿದೆ.
ಸಂವಿಧಾನ ಬದ್ಧವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟನಾ ಶಕ್ತಿ ರೂಪದಲ್ಲಿ ಹೋರಾಟದ ಮೂಲಕ ಪಡೆಯಬೇಕಾಗಿದೆ.

ಸಮಾಜ ಮುಂಚೂಣಿಗೆ ನಿಲ್ಲ ಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು,ಇಡೀ ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದೇನೆ. ತನ್ನ ವಿರುದ್ಧ ಷಡ್ಯಂತ್ರ ನಡೆಸುವುದರ ವಿರುದ್ಧ ಹರಿಹಾಯ್ದರಲ್ಲದೆ ನನ್ನ ಇಡೀ ಜೀವನವನ್ನೆ ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ. ನನ್ನ ಹೋರಾಟದ ಫಲವಾಗಿ ಇವತ್ತು ವಿಶ್ವಕರ್ಮ ಜಯಂತಿಯನ್ನು ರಾಜ್ಯಾದ್ಯಂತ ಸರಕಾರ ಆಚರಿಸುವಂತೆ ಮಾಡಿದ್ದೇವೆ, ರಾಜಕಾರಣ ಶಾಶ್ವತವಲ್ಲ ಆದರೆ ಸಮಾಜಕ್ಕಾಗಿ ಸದಾ ಹೋರಾಟದ ಹಾದಿ ತುಳಿಯುತ್ತೇನೆ ಮುಂದಿನ ದಿನಗಳಲ್ಲಿ ಸಮುದಾಯ ಮಿಸಲಾತಿಗೊಸ್ಕರ ಹೋರಾಟ ಮಾಡುವ ಅಗತ್ಯತೆ ಇದೆ. ಇದು ನಮ್ಮ ಸರಕಾರದ ವಿರುದ್ಧ ಅಲ್ಲ ಬದಲಾಗಿ ಸಮುದಾಯದ ಅಭಿವೃದ್ಧಿಗಾಗಿ ಅಲ್ಲದೆ ಕಟ್ಟ ಕಡೆಯ ವಿಶ್ವಕರ್ಮ ಸಮುದಾಯದ ವ್ಯಕ್ತಿ ಕೂಡಾ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಬಯಕೆ ನನ್ನದು. ವಿಶ್ವಕರ್ಮ ಮಹಾಸಭಾ ಈ ಕಾರ್ಯಕ್ರಮ ಸ್ಥಳೀಯ ಸಾಧಕರನ್ನು ಗುರುತಿಸಿ ಗೌರವಿಸುವುದ್ದರಿಂದ ಇನ್ನಷ್ಟು ಬೆಳೆಯಲು ಸಹಕಾರಿಯಾಗುತ್ತದೆ ಇನ್ನಷ್ಟು ಸಂಘಟಿಸುವ ಕಾರ್ಯನಡೆಯಲಿ ಎಂದು ಹಾರೈಸಿದರು.

Click Here

ಸಭೆಯ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೋಟ ಯುವ ಘಟಕದ ಅಧ್ಯಕ್ಷ ರೋಶನ್ ಆಚಾರ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಸೇರಿದಂತೆ ಸಮುದಾಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಾಸ್ತುಶಿಲ್ಪಿಗಳಾದ ಸುದರ್ಶನ ಆಚಾರ್ಯ, ಯೋಗೀಶ್ ಆಚಾರ್ಯ ಇನ್ನಾ,ಸುಧೀರ್ ಆಚಾರ್ಯ ಪೆರ್ಡೂರು,ಶೈಕ್ಷಣಿಕ ಹಾಗೂ ಯುವ ಸಾಧಕರಾದ ಶ್ಲಾಘ ಸಾಲಿಗ್ರಾಮ ಕವನಾ ಆಚಾರ್ಯ,ವೈಷ್ಣವಿ ಕಡಿಯಾಳಿ,ದಿಪ್ತಿ ಆಚಾರ್ಯ,ಪ್ರಮೋದ್ ಆಚಾರ್ಯ,ದಿಶಾ ಆಚಾರ್ಯ,ಅಶ್ವಿನಿ ಆಚಾರ್ಯ,ಸುಜಯ್ ಆಚಾರ್ಯ,ಅಂಕಿತಾ ಆಚಾರ್ಯ,ಸುಶಾಂತ್ ಆಚಾರ್ಯ,ಸಚಿನ್ ಕುಂಭಾಶಿ ,ಸಮೀಕ್ಷಿತ್ ಕೋಟ,ನವನಿತ್ ಆಚಾರ್ಯಕ್ರೀಡಾಪಟುಗಳು ಸೇರಿದಂತೆ ಹಲವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಶ್ವಕರ್ಮ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀನಿವಾಸ ಮಳಹಳ್ಳಿ, ಲೋಹಿತ್ ವೈ ಕಲ್ಲೂರ್ ,ಅ.ಕ.ವಿ.ಮ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪುರುಷೋತ್ತಮ್, ಅ.ಕ.ವಿ.ಮ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್‍ಆಚಾರ್,ಗೌರವಾಧ್ಯಕ್ಷ ಗಂಗಾಧರ ಆಚಾರ್ ಉದ್ದಲ್ ಗುಡ್ಡೆ,ಯುವ ಘಟಕಾಧ್ಯಕ್ಷ ಕೋಟ ರಾಮಕೃಷ್ಣ ಆಚಾರ್,ಮಹಿಳಾ ಘಟಕಾಧ್ಯಕ್ಷೆ ರುಕ್ಮಿಣಿ ರಮೇಶ್ ಆಚಾರ್ ಬಂಡಿಮಠ,ಉದ್ಯಮಿ ಸೀತಾರಾಮ್ ಆಚಾರ್ ,ಕೋಟ ಘಟಕದ ಮಹಿಳಾ ಅಧ್ಯಕ್ಷೆ ಶಾರದಾರಾಮಚಂದ್ರ ಆಚಾರ್ಯ,ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

2022 ರಲ್ಲಿ ನಡೆಯುವ ರಾಜ್ಯ ಮಟ್ಟದ ಸಮುದಾಯದ ಕ್ರಿಕೆಟ್ ಪಂದ್ಯಾಟದ ಬಿತ್ತಿಪತ್ರವನ್ನು ಅನಾವರಣಗೈಯಲಾಯಿತು. ಕಾರ್ಯಕ್ರಮವನ್ನು ಮಂಜುನಾಥ ಆಚಾರ್ಯ ಕಾರ್ತಟ್ಟು ನಿರೂಪಿಸಿದರು.ಯೋಗಿಶ್ ಆಚಾರ್ಯ ವಂದಿಸಿದರು ,ಪ್ರಮೋದ್ ಆಚಾರ್ಯ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here