ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಶಾಲೆಗಳಿಗೆ ಬೇಕಾಗುವ ಸೌಲಭ್ಯಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಜನಪ್ರತಿನಿಧಿಗಳಾಗಿ ನಮ್ಮ ಕರ್ತವ್ಯ ಎಂದು ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೊತಿ ಉದಯಕುಮಾರ್ ಪೂಜಾರಿ ಹೇಳಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು ಐರೋಡಿ ಇಲ್ಲಿನ ಮಕ್ಕಳಿಗೆ ಬಾಂಧವ್ಯ ಬ್ಲಡ್ ಗ್ರೂಪ್ ತುರ್ತು ಸಹಾಯ ಯೋಜನೆ ವತಿಯಿಂದ ನೀಡಲ್ಪಡುವ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸಂಘ ಸಂಸ್ಥೆಗಳು ಸಹಾಯಹಸ್ತ ಯೋಜನೆಯಿಂದ ವಿದ್ಯಾರ್ತಿಗಳಿಗೆ ಪ್ರೋತ್ಸಾಹಕ ಕಾರ್ಯ ನೀಡಿದಂತ್ತಾಗುತ್ತದೆ ಮಾತ್ರವಲ್ಲದೆ ಶಾಲೆಯ ಅಭಿವೃದ್ಧಿಗೆ ಪ್ರೇರಕ ಶಕ್ತಯಾಗಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಇಲ್ಲಿನ ಮಕ್ಕಳಿಗೆ ಉಚಿತ ನೋಟ್ ಪುಸ್ತಕವನ್ನು ಬಾಂಧವ್ಯ ಬ್ಲಡ್ ಗ್ರೂಪ್ ರಾಜ್ಯಾಧ್ಯಕ್ಷ ದಿನೇಶ್ ಬಾಂಧವ್ಯ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದರು.
ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ವಿಜಯ ಪೂಜಾರಿ, ದಾನಿಗಳಾದ ನಿರೀಕ್ಷಾ, ಗೌರವ ಶಿಕ್ಷಕಿ ಅರ್ಚನಾ, ಭವಾನಿ ಹಳೆ ವಿದ್ಯಾರ್ಥಿ ಲಾಯಡ್ ರೋಡ್ರಿಗಾಸ್ ಮತ್ತಿತರರು ಉಪಸ್ಥಿತರಿದ್ದರು. ಶಾಲೆ ಮುಖ್ಯ ಶಿಕ್ಷಕ ಮಹೇಶ್ ಸ್ವಾಗತಿಸಿ ವಂದಿಸಿದರು.











