ಕುಂದಾಪುರ: ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವು – ಆರೋಪಿಯ ಬಂಧನ

0
2208

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಮಲಶಿಲೆ ಗ್ರಾಮದ ರಾಘವೇಂದ್ರ ಯಡಿಯಾಳ(41) ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಘಟನೆ ನಡೆದಿದೆ.

1,30,000 ಮೌಲ್ಯದ ಎರಡು ಚಿನ್ನದ ಬಳೆಗಳು, 1,50,000 ಮೌಲ್ಯದ ಚಿನ್ನದ ಸರ, 20,000 ಮೌಲ್ಯದ ಚಿನ್ನದ ಉಂಗುರ ಮತ್ತು 5,000 ರೂ.ನಗದು ಕಳ್ಳತನವಾಗಿದೆ.

Click Here

ತನಿಖೆ ಮುಂದುವರಿಸಿದ ಪೊಲೀಸರು ಬೈಂದೂರು ಉಪ್ಪುಂದ ನಿವಾಸಿ ಶ್ರೀಧರ್ ಮಡಿವಾಳ (38) ಎಂಬಾತನನ್ನು ಬಂಧಿಸಿದ್ದು, ಕಳವು ಮಾಡಿದ್ದ ಚಿನ್ನದ ಬಳೆಗಳು, ಚಿನ್ನದ ಸರ ಮತ್ತು ಚಿನ್ನದ ಉಂಗುರವನ್ನು ಒಟ್ಟು 3 ಲಕ್ಷ ರೂ. ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್‌ ಅಧೀಕ್ಷಕ ಎಮ್. ವಿಷ್ಣುವರ್ಧನ್ ಹಾಗೂ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್‌.ಟಿ ಸಿದ್ದಲಿಂಗಪ್ಪರವರ ನಿರ್ದೇಶನದಂತೆ ಪೊಲೀಸ್‌ ಉಪಾಧೀಕ್ಷಕರಾದ ಶ್ರೀಕಾಂತ.ಕೆ , ಕುಂದಾಪುರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಕುಂದಾಫುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಅವರು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಕಾರ್ಯಚರಣೆಯಲ್ಲಿ ಶಂಕರನಾರಯಣ ಪೊಲೀಸ್ ಠಾಣಾ ಪಿಎಸ್ಐ ಶ್ರೀಧರ ನಾಯ್ಕ ಹಾಗೂ ಸುಧರ್ಶನ್ ಪಿಎಸ್ಐ ಹಾಗೂ ಸಿಬ್ಬಂದಿಯವರಾದ ಸೀತರಾಮ ಶೆಟ್ಟಿಗಾರ, ರಾಘವೇಂದ್ರ, ಗೋಪಾಲ ಕೃಷ್ಣ, ಮಂಜುನಾಥ್ ರಾಕೇಶ್ ಅನಿಲ್ ಕುಮಾರ್ ವಿಲ್ಫ್ರೆಡ್ ಡಿಸೋಜ ವಿಲಾಸ್ ರಾಥೋಡ್. ಆಲಿಂಗರಾಯ ಕಾಟೆ, ಚಂದ್ರ ಕುಮಾರ್, ಜಯರಾಮ ನಾಯ್ಕ ಪಾಲ್ಗೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here