ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಿದ್ದಾಪುರದ ಸರಸ್ವತಿ ವಿದ್ಯಾಲಯ ಯಶಸ್ವಿ 21 ವರ್ಷಗಳನ್ನು ಪೂರೈಸಿದ್ದು, 2011ರಿಂದ ಎಸ್.ಎಸ್.ಎಲ್.ಸಿಯನ್ನು 12 ಬ್ಯಾಚ್‍ಗಳನ್ನು ಮುಗಿಸಿದ್ದಾರೆ. ನಿರಂತರ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವ ಸಂಸ್ಥೆಗೆ 21 ವರ್ಷ ತುಂಬಿದ ಸಂದರ್ಭದಲ್ಲಿ ಜೂನ್ 25 ಶನಿವಾರ ಪೂರ್ವ ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’, ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಸಮಿತಿ ಸಂಚಾಲಕರಾದ ದಕ್ಕೇರಬಾಳು ಗೋಪಾಲಕೃಷ್ಣ ಕಾಮತ್ ಹೇಳಿದರು.
Video:
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿ ಜೂನ್ 25ರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಡಾ.ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿ, ಬೆಂಗಳೂರಿನ ಆರ್.ಎನ್.ಎಸ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಧೀರ್ ಪೈ, ಎಂಐ.ಟಿಯ ಡಾ.ನಾರಾಯಣ ಶೆಣೈ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 2011ರಿಂದ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.
70 ವಿದ್ಯಾರ್ಥಿಗಳಿಂದ ವಿದ್ಯಾಸಂಸ್ಥೆ ಆರಂಭಗೊಂಡಿದ್ದು ಈಗ 410 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವೊಂದು ಶೈಕ್ಷಣಿಕ ವರ್ಷಗಳಲ್ಲಿ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು. 2011-12ರ ಪ್ರಥಮ ಬ್ಯಾಚ್‍ನಲ್ಲಿ 615 ಅಂಕ ಪಡೆದು ಕೀರ್ತನ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದರು ಎಂದರು.
ಸುದ್ಧಿಗೋಷ್ಠಿಯಲ್ಲಿ ವಿಶ್ವಸ್ಥ ಮಂಡಳಿ ಸದಸ್ಯ ಟಿ.ಜಿ ಪಾಂಡುರಂಗ ಪೈ ಉಪಸ್ಥಿತರಿದ್ದರು.











