ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಆದರೆ ಸೂಕ್ತ ಆವಕಾಶದ ಸದ್ಭಳಕೆಯಿಂದ ನಾವು ಇಂತಹ ಸಾಧನೆ ಮಾಡಿ ಪುರಸ್ಕಾರಕ್ಕೆ ಪಾತ್ರರಾಗುತ್ತೇವೆ ಎಂದು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರು ಮೋಹನ್‍ದಾಸ್ ಶಣೈ ಹೇಳಿದರು.

ಅವರು ಸರಕಾರಿ ಪದವಿ ಪೂರ್ವಕಾಲೇಜು( ಬೋರ್ಡ್ ಹೈಸ್ಕೂಲ್) ಇಲ್ಲಿನ ಕಳೆದ ಸಾಲಿನ ಎಸ್‍ಎಸ್‍ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 49 ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್ ಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸತೀಶ ಖಾರ್ವಿ ಮಾತನಾಡಿ ಕುಂದಾಪುರ ವಲಯದಲ್ಲೇ ಅತ್ಯಧಿಕ ವಿಧ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ವಿದ್ಯಾ ಸಂಸ್ಥೆ ನಮ್ಮದಾಗಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳ ವಿಶ್ವಾಸಕ್ಕೆ ಕೊರತೆ ಯಾಗದ ಫಲಿತಾಂಶ ತರುವಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಈ ಪುರಸ್ಕಾರಕ್ಕೆ ಸಾಕ್ಷಿ ಎಂದರು.
ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗದಲ್ಲಿ ಶಾಲೆಗೆ ಪ್ರಥಮ ಸ್ಥಾನಿಯಾದ ರಕ್ಷಿತಾ ಮತ್ತು ಶ್ರೇಯಸ್ ಅವರನ್ನು ಪೋಷಕರೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಭೂಮಿಕಾ ಸೌಜನ್ಯ ಶ್ರೇಯಸ್ ತಮ್ಮ ಈ ಸಾಧನೆಗೆ ಕಳೆದ ಸಾಲಿನ ವಿದ್ಯಾರ್ಥಿಗಳ ಪ್ರೇರಣೆ ಮತ್ತು ಅಧ್ಯಾಪಕರ ಶ್ರಮವನ್ನು ಸ್ಮರಿಸಿದರು.
ಸಂಸ್ಥೆಯ ಪ್ರಭಾರ ಉಪಪ್ರಾಂಶುಪಾಲರಾದ ವಿನುತಾ ಗಾಂವ್‍ಕರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ಶಂಕರನಾರಾಯಣ ಮಿತ್ಯಂತಾಯಾ ಸಾಧಕರ ಪಟ್ಟಿ ವಾಚಿಸಿದರು. ಶಿಕ್ಷಕ ಪ್ರದೀಪಕುಮಾರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಗಣೇಶ ಕಾಂಚನ್ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ವಂದಿಸಿದರು.











