ಮರವಂತೆ: ಸಮುದ್ರಕ್ಕೆ ಬಿದ್ದ ಕಾರು-ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

0
1323

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜು. 03ರ ಬೆಳಿಗ್ಗಿನ ಜಾವ 2 ಗಂಟೆ ಸುಮಾರಿಗೆ ಮರವಂತೆಯಲ್ಲಿ ಕಾರು ಸಮುದ್ರಕ್ಕೆ ಬಿದ್ದ ಪರಿಣಾಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ರೋಷನ್ ಅವರ ಮೃತದೇಹ ಸೋಮವಾರ ತ್ರಾಸಿ ಹೊಸಕೋಟೆ ಬಳಿ ಪತ್ತೆಯಾಗಿದೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ರೋಷನ್ ಗಾಗಿ ಆದಿತ್ಯವಾರದಿಂದ ವ್ಯಾಪಕ ಶೋಧ ಆರಂಭಗೊಂಡಿತ್ತು. ಸೋಮವಾರ ಕಾರ್ಯಾಚರಣೆ ವೇಳೆ ಶವ ಪತ್ತೆಯಾಗಿದೆ.

Click Here

ಶನಿವಾರ ತಡರಾತ್ರಿ ಸ್ವಿಪ್ಟ್ ಕಾರಿನಲ್ಲಿ ಬೀಜಾಡಿಯ ವಿರಾಜ್ ಆಚಾರ್ ಹಾಗೂ ಅವರ ಸಂಬಂಧಿಕರಾದ ಕಾರ್ತಿಕ, ರೋಷನ್, ಹಾಗೂ ಸಂದೇಶನೊಂದಿಗೆ ಕುಂದಾಪುರ ದಿಂದ ಕುಮಟಾ ಕಡೆಗೆ ಹೊರಟಿದ್ದರು, ಮರವಂತೆ ಗ್ರಾಮದ ಮರವಂತೆಯ ವರಹ ಮಹಾರಾಜಸ್ವಾಮಿ ದೇವಸ್ಥಾನದ ಬಳಿ ತಲುಪುವಾಗ ಕಾರನ್ನು ಚಲಾಯಸುತ್ತಿದ್ದ ವಿರಾಜ್‍ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಪಟ್ಟಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಅರಬ್ಬಿ ಸಮುದ್ರಕ್ಕೆ ಬಿದ್ದಿತು. ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿದ್ದ ಕಾರ್ತಿಕ ಆಚಾರ್ ಹಾಗೂ ಸಂದೇಶ ರವರಿಗೆ ಪೆಟ್ಟಾಗಿದ್ದು, ಚಾಲಕ ವಿರಾಜ್ ಆಚಾರ್ ಮೃತಪಟ್ಟಿದ್ದು, ರೋಶನ್ ಆಚಾರ್‍ರವರು ಸಮುದ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here