ಕುಂದಾಪುರ ಮಿರರ್ ಸುದ್ದಿ…
ಕೋಟ: ಕಳೆದೊಂದು ವಾರದಿಂದು ಸುರಿಯುತ್ತಿರುವ ಧಾರಾಕಾರ ಮಳೆಗೆ ಕೋಟ ಗ್ರಾಮದಲ್ಲಿ ವ್ಯಾಪ್ತಿಯ , ಗಿಳಿಯಾರು, ಮೂಡುಗಿಳಿಯಾರು ಭಾಗ ನರೆಪೀಡಿತ ಪ್ರದೇಶವಾಗಿ ಸಾಕಷ್ಟು ಕೃಷಿ ಭೂಮಿ ಹಾನಿಗೊಂಡಿದೆ.
ಈ ಭಾಗಗಳಿಗೆ ಕೇಂದ್ರ ಕೃಷಿ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ನೆರೆ ಪರಿಶೀಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿ ಮಳೆಯಿಂದ ಹಾನಿಯಾದ ರಸ್ತೆ,ಭಾರಿ ಪ್ರಮಾಣದ ಕೃಷಿ ಭೂಮಿ ನಾಶಗೊಂಡಿದೆ ಅದರ ಸರ್ವೆಕಾರ್ಯ ನಡೆಸಿ ಸರಕಾರಕ್ಕೆ ಡಿಸಿ ವರದಿ ನೀಡಲಿದ್ದಾರೆ. ಹೀಗೆ ಆಯಾ ಭಾಗಗಳಲ್ಲಿ ಪೂರ್ಣಪ್ರಮಾಣದಲ್ಲಿ ಹಾನಿಗೊಂಡ ಮನೆಗಳಿಗೆ ಈ ಹಿಂದೆ ಯಡಿಯೂರಪ್ಪ ಸರಕಾರ ಘೋಷಣೆ ಮಾಡಿದ ರೂ. 5ಲಕ್ಷ ಭಾಗಶಃ ಹಾನಿಗೊಂಡ ಮನೆಗಳಿಗೆ ಸಮರ್ಪಕ ಪರಿಹಾರ ನೀಡಲಿದೆ.
ಇನ್ನುಳಿದಂತೆ ಹಾನಿಗೊಂಡ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ನೆರೆಗೆ ಕಾರಣವಾಗುವ ಹೂಳು, ಸೇತುವೆ ಪುನರ್ ನಿರ್ಮಾಣದ ಕುರಿತಂತೆ ಸರಕಾರ ಅನುದಾನ ಒದಗಿಸಲು ಬದ್ಧರಿದ್ದೇವೆ ಎಂದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ಎಂ ರಾವ್, ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಕೋಟ ರೈತಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ, ಕೋಟ ಕಂದಾಯ ನೀರಿಕ್ಷಕ ರಾಜು, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಕೃಷಿ ಇಲಾಖೆ ಸಿಬ್ಬಂದಿ ಸಂಜನಾ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಮಾಜಿ ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡ ಅವಿನಾಶ ಒಳ್ತೂರ್ ಕೋಟ ಗ್ರಾಮಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.











