ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಕಲಾರಂಗಕ್ಕೆ – ಸಚಿನ್ ಶೆಟ್ಟಿ ಯಾಳಕ್ಲು ಆಯ್ಕೆ

0
591

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

Click Here

ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಚಿನ್ ಶೆಟ್ಟಿ ಯಾಳಕ್ಲು ವಡ್ಡರ್ಸೆ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. ಉಪಾಧ್ಯಕ್ಷರಾಗಿ ರಮೇಶ್ ಪೂಜಾರಿ ಬನ್ನಾಡಿ, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಐತಾಳ್ ಕಾವಡಿ,ಕಾರ್ಯದರ್ಶಿಯಾಗಿ ಸತೀಶ್ ಪೂಜಾರಿ ವಡ್ಡರ್ಸೆ, ಜೊತೆ ಕಾರ್ಯದರ್ಶಿ ಯಾಗಿ ಪದ್ಮನಾಭ ಆಚಾರ್ಯ ಬನ್ನಾಡಿ, ಪ್ರಚಾರ ಸಮಿತಿಯ ಮಾಧ್ಯಮ ವಕ್ತಾರರಾಗಿ ರಾಘವೇಂದ್ರ .ಆರ್. ದೇವಾಡಿಗ ಹಾಗೂ ಸುದರ್ಶನ ಸೋಮಯಾಜಿಯವರನ್ನು ನೇಮಿಸಲಾಗಿದೆ. ಈಸಂದರ್ಭ ಗೌರವಾಧ್ಯಕ್ಷರಾಗಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾಗಿ ಲೋಕೇಶ್ ಭಟ್ ಬನ್ನಾಡಿ, ರುದ್ರಯ್ಯ ಆಚಾರ್ ನೀರ್ಕೊಡ್ಲು, ಶಿಕ್ಷಕ ಸತೀಶ್ ಪೂಜಾರಿ ವಡ್ಡರ್ಸೆ ,ಜಯಕರ ಶೆಟ್ಟಿ ವಡ್ಡರ್ಸೆ, ಮಹಾಬಲ ಯಾಳಕ್ಲು,ಜಗದೀಶ್ ಪೂಜಾರಿ(ಮೇಸ್ತ್ರಿ) ಆಯ್ಕೆಗೊಳಿಸಲಾಗಿದೆ.

ಈ ವೇಳೆ ಕಲಾ ರಂಗದ ನಿಕಟಪೂರ್ವ ಅಧ್ಯಕ್ಷ ವಿಘ್ನೇಶ್ ಶೆಟ್ಟಿ ವಡ್ಡರ್ಸೆ, ಶ್ರೀಕಾಂತ್ ಭಟ್ ಉಪ್ಲಾಡಿ,ಸತೀಶ್ ಶೆಟ್ಟಿ ವಡ್ಡರ್ಸೆ, ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here