ಕೊಮೆ- ರಾಮನಾಮ ತಾರಕ ಮಂತ್ರದ ಲಿಖಿತ ಜಪ ಯಜ್ಞದ ಪುಸ್ತಕ ಬಿಡುಗಡೆ

0
512

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಪಟ್ಟಾಭಿ ರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇದರ ಜೀರ್ಣೋದ್ಧಾರ ಕಾರ್ಯವು ಪ್ರಗತಿಯಲ್ಲಿದ್ದು ಆ ಪ್ರಯುಕ್ತ ರಾಮನಾಮ ತಾರಕ ಮಂತ್ರದ ಲಿಖಿತ ಜಪ ಯಜ್ಞದ ಪುಸ್ತಕವನ್ನು ಸಮಿತಿಯ ಗೌರವಾಧ್ಯಕ್ಷ ಆನಂದ ಸಿ ಕುಂದರ್ ಕೋಟ ಇವರು ಬಿಡುಗಡೆ ಮಾಡಿ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು.

Click Here

ಇದೇ ಸಂದರ್ಭದಲ್ಲಿ ಮನವಿ ಪತ್ರ ಹಾಗೂ ಸಹಾಯ ಧನದ ಕೂಪನ್ ಸಹ ಬಿಡುಗಡೆ ಮಾಡಲಾಯಿತು. ಸಮಿತಿಯ ಅಧ್ಯಕ್ಷ ಎಸ್.ವಿಠ್ಠಲ್ ಪೈ ಸಾಲಿಗ್ರಾಮ, ಭಜನಾ ಮಂಡಳಿಯ ಅಧ್ಯಕ್ಷ ಕೆ.ಚಂದ್ರ ಕಾಂಚನ್,ಕೃಷ್ಣ ಪೂಜಾರಿ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯದರ್ಶಿ ರಾಜು ಪೂಜಾರಿ ಸ್ವಾಗತಿಸಿದರು, ಹರೀಶ್ ಕೊರವಡಿ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here