ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಮಹಾಸಭೆ

0
368

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಂಘ ಸಾಲಿಗ್ರಾಮ ಇದರ 18ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸತೀಶ್ ಕೆ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಗಿರಿಜಾ ಕಲ್ಯಾಣ ಮಂಟಪ ಸಾಲಿಗ್ರಾಮದಲ್ಲಿ ಇತ್ತೀಚಿಗೆ ನಡೆಯಿತು.

ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕ ಗಿರೀಶ್ ಪೈ ಇವರು ಸಹಕಾರಿ ಕ್ಷೇತ್ರಕ್ಕೆ ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಹಾಗೂ ವಿವೇಕ ಜೂನಿಯರ್ ಕಾಲೇಜಿನ ಉಪನ್ಯಾಸಕ ಸಂಜೀವ ಗುಂಡ್ಮಿ ಇವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

Click Here

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇದರ ನಿರ್ದೇಶಕ ಮಂಜುನಾಥ ಎಸ್ ಕೆ, ಶ್ರೀ ಕೃಷ್ಣ ಸೌಹಾರ್ದ ಸಹಕಾರಿ ಸಾಲಿಗ್ರಾಮ ಇದರ ಉಪಾಧ್ಯಕ್ಷ ನರಸಿಂಹ ನಾಯ್ಕ, ನಿರ್ದೇಶಕರು, ಸಹಕಾರಿಯ ಸದಸ್ಯರು ಹಾಗೂ ಉಪಸ್ಥಿತರಿದ್ದರು.

ಸಹಕಾರಿಯ ಅಧ್ಯಕ್ಷ ಸತೀಶ್ ಕೆ ನಾಯ್ಕ ಸ್ವಾಗತಿಸಿದರು, ಸಿ.ಇ.ಓ ಕುಮಾರಿ ತನುಜಾ ಎಸ್ ಇವರು ವರದಿ ವಾಚಿಸಿದರು. ಸಿಬ್ಬಂದಿಯಾದ ನಿತಿನ್, ಅಕ್ಷಯ್ ಸಹಕರಿಸಿದರು. ನಿರ್ದೇಶಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here