ಗಣೇಶೋತ್ಸವ ನಮ್ಮ ಸಂಸ್ಕೃತಿಕ ಪ್ರತೀಕ – ಅಭಿಜಿತ್ ಪಾಂಡೇಶ್ವರ

0
249

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗಣೇಶೋತ್ಸವ ಕಾರ್ಯಕ್ರಮಗಳು ಗ್ರಾಮದ ಒಗ್ಗಟ್ಟು ಕೇಂದ್ರಿಕರಿಸುವ ಉತ್ಸವವಾಗಿ ಸಂಸ್ಕ್ರತಿ ಸಾರುವ ಉತ್ಸವವಾಗಿದೆ ಎಂದು ಪಾಂಡೇಶ್ವರ ಕಳಿಬೈಲು ಶ್ರೀ ಸ್ವಾಮೀ ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಹೇಳಿದರು.
ಸೋಮವಾರ ಇಲ್ಲಿನ ಪಾಂಡೇಶ್ವರ ಮೂಡಹಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಆಗಿನ ಕಾಲದಲ್ಲಿ ತಿಲಕರು ಮೊಳಗಿಸಿ ಈ ಉತ್ಸವ ಧಾರ್ಮಿಕ ಭಾವನೆ ಮೂಡಿಸುವ ಜತೆಗೆ ಸಾಂಸ್ಕೃತಿಕವಾಗಿ ರೂಪುಗೊಳಿಸವ ಕೇಂದ್ರವಾಗಿದೆ ಎಂದರು.
ಇದೇ ವೇಳೆ ಗ್ರಾಮದ ಹಿರಿಯ ಕೃಷಿಕ ಕೃಷ್ಣ ಮರಕಾಲ,ಕ್ರೀಡಾ ಸಾಧಕ ಸುಭಾಷ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಗ್ರಾಮದಲ್ಲಿನ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗಣೇಶೋತ್ಸವ ವತಿಯಿಂದ ಹಮ್ಮಿಕೊಂಡ ಕ್ರೀಡಾಕಾರ್ಯಕ್ರಮದ ವಿಜೇತರಾದವರಿಗೆ ಬಹುಮಾನ ವಿತರಣೆ ಜರಗಿತು.
ಸಭಾಧ್ಯಕ್ಷತೆಯನ್ನು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಆಡಳಿತ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ರಘು ಪೂಜಾರಿ,ಎನ್ ಭಾಸ್ಕರ ಸುವರ್ಣ, ಸಮಿತಿ ಗೌರವಾಧ್ಯಕ್ಷರಾದ ನಾರಾಯಣ ವಿ ಆಚಾರ್ಯ, ರವಿ ಪೂಜಾರಿ ಕುದ್ರು, ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರಿ ಉಪಸ್ಥಿತರಿದ್ದರು.

Click Here

ಕಾರ್ಯಕ್ರಮವನ್ನು ಮಹೇಂದ್ರ ಆಚಾರ್ಯ ಹೆರಂಜೆ ಸ್ವಾಗತಿಸಿ ನಿರೂಪಿಸಿ ಸನ್ಮಾನಪತ್ರ ವಾಚಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಾಂಡೇಶ್ವರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ,ಈಶ ಲಾಸ್ಯ ನೃತ್ಯ ತಂಡದಿಂದ ನೃತ್ಯ,ಶ್ರೀಶ ಆಚಾರ್ಯ ಇವರಿಂದ ಗಾನವೈಭವ ಕಾರ್ಯಕ್ರಮಗಳು ಜರಗಿದವು.

Click Here

LEAVE A REPLY

Please enter your comment!
Please enter your name here