ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :1965 ರಿಂದ ಸೌಹಾರ್ದತೆ ಮತ್ತು ಕ್ರೀಡಾ ಸಂಸ್ಕೃತಿಯ ಪ್ರತೀಕವಾಗಿ ಗುರುತಿಸಿಕೊಂಡಿರುವ ಕುಂದಾಪುರ ಸ್ಪೋರ್ಟ್ಸ್ ಕ್ಲಬ್ ನ ಮಹತ್ವಾಕಾಂಕ್ಷೆಯ ನೂತನ ಅತ್ಯಾಧುನಿಕ ಕ್ರೀಡಾ ಸಂಕೀರ್ಣದ ನಿರ್ಮಾಣ ಕಾಮಗಾರಿಗೆ ಕ್ಲಬ್ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿತು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, “Building a Legacy” ಧ್ಯೇಯದೊಂದಿಗೆ 60 ವರ್ಷಗಳ ಇತಿಹಾಸ ಹೊಂದಿರುವ ಕುಂದಾಪುರ ಸ್ಪೋರ್ಟ್ಸ್ ಕ್ಲಬ್ ತಾಲೂಕಿನ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದೆ. ನೂತನ ಕ್ರೀಡಾ ಸಂಕೀರ್ಣದಿಂದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕ್ಲಬ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಮಾಜಿ ರಕ್ಷಣಾ ಕಾರ್ಯದರ್ಶಿ ಸುಭಾಷ್ ಚಂದ್ರ, ಉದ್ಯಮಿ ದಿನೇಶ್ ಹೆಗ್ಡೆ, ಕ್ಲಬ್ ಅಧ್ಯಕ್ಷ ಸಿಲೆಸ್ಟರ್ ಅಲ್ಮೇಡಾ, ರಾಕೇಶ್ ಸೋನ್ಸ್, ಪ್ರವೀಣ್ ಟಿ,ವಿನಾಯಕ ಪೈ, ಕೃಷ್ಣಾನಂದ ಚಾತ್ರ, ರಾಜೇಂದ್ರ ತೋಳಾರ್, ಆದರ್ಶ್ ಹೆಬ್ಬಾರ್, ವಿನೋದ್ ಕ್ರಾಸ್ತಾ ಉಪಸ್ಥಿತರಿದ್ದರು. ಹಾಗೂ, ಕ್ಲಬ್ ನ ಪೋಷಕ ಸದಸ್ಯರು ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.












