ಕುಂದಾಪುರ ಮಿರರ್ ಸುದ್ದಿ…
ಕೋಟ: ಮೀನುಗಾರ ರೈತ ಬಾಂಧವರಿಗೆ ರೈತ ಉತ್ಪಾದಕ ಕಂಪನಿಯ ಬಗ್ಗೆ ಮತ್ತು ಕಂಪನಿಯ ಷೇರುದಾರರಿಗೆ ಷೇರಿನ ಮಾಹಿತಿ ಮತ್ತು ಸಿಗುವಂತಹ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಶುಕ್ರವಾರ ಕೋಡಿಯಲ್ಲಿ ನಡೆಯಿತು.
ಉಡುಪಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ ರೈತ ಉತ್ಪಾದಕ ಕಂಪನಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಹಾಗೆಯೇ ಸ್ಕೋಡವೆಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನೀಲಕಂಠ ಶೇಷಗಿರಿ ಮೀನುಗಾರರಿಗೆ ಸಸಿ ವಿತರಿಸಿ ಮಾಹಿತಿ ನೀಡಿದರು. ಈ ವೇಳೆ ರೈತ ಆಸಕ್ತ ಗುಂಪು ಮತ್ತು ರೈತ ಮಹಿಳಾ ಮೀನುಗಾರರಿಗೆ ಮಹಿಳಾ ಸ್ವಾವಲಂಬಿ ಯೋಜನೆ ಬಗ್ಗೆ ಮಾಹಿತಿ ಮತ್ತು ಮಹಿಳಾ ಗುಂಪು ರಚನೆಗೊಂಡಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೀತಾ ಖಾರ್ವಿ, ಉಡುಪಿ ಕಿನಾರ ಉತ್ಪಾದಕ ಕಂಪನಿಯ ಅಧ್ಯಕ್ಷ ಲೋಹಿತ್ ಖಾರ್ವಿ, ನಿರ್ದೇಶಕ ಹರೀಶ್ ಕುಂದರ್, ಮಾಲತಿ ಎಸ್ ಮೆಂಡನ್, ಕಾರ್ಯ ನಿರ್ವಾಹಕ ಅಧಿಕಾರಿ ಸುದಿನ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭೂಮಿಕಾ ಅವರು ಉಪಸ್ಥಿತರಿದ್ದರು.











