ಮನೆಗೊಂದು ಸಸಿ ಉಳಿಸಿ ಬೆಳಸಿ- ಕೋಡಿ ಗ್ರಾಮ ಪಂಚಾಯತ್ ವಿನೂತನ ಕಾರ್ಯಕ್ರಮ

0
298

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಡಿ ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಕೋಟ, ಹಾಗೂ ಸಮನ್ವಯ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಇವರ ಸಹಭಾಗಿತ್ವದಲ್ಲಿ “ಮನೆಗೊಂದು ಗಿಡ” ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರತಿ ಮನೆಗೊಂದು ಗಿಡವನ್ನು ವಿತರಿಸುವ ವಿನೂತನ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾನದ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ವಹಿಸಿದ್ದರು

Click Here

ಈ ಕಾರ್ಯಕ್ರಮವನ್ನು ಕೋಟದ ಗೀತಾನಂದ ಪೌಂಡೇಶನ್‍ನ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿ ಪ್ರತಿ ಮನೆಯಲ್ಲಿಯೂ ಗಿಡವನ್ನು ನೆಡುವುದರಿಂದ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಬಹುದು, ನಾವು ನೆಡುವ ಈ ಗಿಡವು ನಮಗೆ ಅಥವಾ ನಮ್ಮ ಮುಂದಿನ ಪೀಳಿಗೆಗೆ ಪ್ರಯೋಜವಾಗುತ್ತದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ , ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಜಿ ಕುಂದರ್, ಸಮನ್ವಯ ಸಂಜೀವಿನಿ ಸಂಘದ ಪದಾಧಿಕಾರಿಗಳು ಸದಸ್ಯರು ಗ್ರಾಮ ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here