ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಸ್ತಾನ ಶ್ರೀ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿ ಹಾಗೂ ಕಳಿಬೈಲ್ ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಇದರ ಶ್ರೀ ಕಳಿಬೈಲ್ ಕೊರಗಜ್ಜ ಸೇವಾ ಸಮಿತಿಯ ವತಿಯಿಂದ ಹಸಿರು ಕಳಿಬೈಲ್ ಕಾರ್ಯಕ್ರಮ ಸಾಧಕರಿಗೆ ಗೌರವ ಕಾರ್ಯಕ್ರಮ ಭಾನುವಾರ ಜರಗಿತು.
ಕಾರ್ಯಕ್ರಮಕ್ಕೆ ಬಾರಕೂರು ಶ್ರೀ ಕಚ್ಚೂರೂ ಮಾಲ್ತಿ ದೇವಿ, ಬಬ್ಬು ಸ್ವಾಮಿ ಮೂಲ ಕ್ಷೇತ್ರದ ಧರ್ಮದರ್ಶಿ ಗೋಕುಲ್ ದಾಸ್ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಗರಾಜ್ ಪುತ್ರನ್, ದಿನೇಶ್ ಭಾಂದವ್ಯ, ಸುರೇಶ ಪೂಜಾರಿ ಹಾಗೂ ಗಣೇಶ್ ಪೂಜಾರಿ ಇವರುಗಳನ್ನು ಗೌರವಿಸಲಾಯಿತು.
ಸಭಾ ಅಧ್ಯಕ್ಷತೆಯನ್ನು ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ಕೆ. ವಿ. ರಮೇಶ್ ರಾವ್, ವಹಿಸಿದ್ದರು. ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಸಂಕಲ್ಪ ನಿಧಿಗೆ ಮುಷ್ಟಿ ಕಾಣಿಕೆ ಹಾಕಿ ಚಾಲನೆ ನೀಡಿದರು,ಟೀಮ್ ಅಭಿಮತದ ವಸಂತ ಗಿಳಿಯಾರ್ ತನಿಯ ವಿದ್ಯಾ ನಿಧಿ ಚೆಕ್ ನೀಡುದರ ಮೂಲಕ ಶುಭ ಹಾರೈಸಿದರು, ಹಾಗೂ ಹಸಿರು ಕಳಿಬೈಲ್‍ನ್ನು ಗಿಡ ನೀಡುದರ ಮೂಲಕ ಬಿಜೆಪಿ ರಾಜ್ಯ ಸಮಿತಿಯ ಪಂಚಾಯತ್ ಪ್ರಕೋಷ್ಠದ ಸದಸ್ಯ ಪ್ರಥ್ವಿ ರಾಜ್ ಶೆಟ್ಟಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆ ಶಶಿಧರ್ ರಾವ್, ಜಯಕರ ಐರೋಡಿ, ಉಪಸ್ಥಿತರಿದ್ದರು, ಕಾರ್ಯಕ್ರಮ ಸಂಯೋಜಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ, ಸುನಿಲ್ ಪಾಂಡೇಶ್ವರ್ ಕಾರ್ಯಕ್ರಮವನ್ನು ನಿರೂಪಿಸಿದರು.











