ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಭಾನುವಾರ ಕರ್ಕಾಟಕ ಸಂಕ್ರಮಣದ ವಿಶೇಷವಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಅಥರ್ವಶೀರ್ಷ ಹೋಮವನ್ನು ಶ್ರೀದೇವಳದ ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಾಜಿ ಇವರ ಪ್ರಧಾನ ಆಚಾರ್ಯತ್ವದಲ್ಲಿ, ಸಹ ಋತ್ವಿಜರ ಸಹಕಾರದೊಂದಿಗೆ ಶ್ರೀ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಆರ್ ಎಂ. ಶ್ರೀಧರ ರಾವ್ ದಂಪತಿಗಳು ಮಿಯಾಪದವು ಇವರ ಯಜಮಾನತ್ವದಲ್ಲಿ ನೆರವೇರಿತು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ, ಕಾರ್ಯದರ್ಶಿ ಪಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ವೇ.ಮೂ. ಪರಶುರಾಮ ಭಟ್ಟ, ಸದಸ್ಯರಾದ ಪಿ ಸದಾಶಿವ ಐತಾಳ, ಕೂಟ ಮಹಾಜಗತ್ತಿನ ವಿವಿಧ ಅಂಗ ಸಂಸ್ಥೆಗಳ ಸದಸ್ಯರು, ಗ್ರಾಮಮೊಕ್ತೇಸರರು ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ಸಹಕರಿಸಿದರು.











