ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಹಂಗಾರಕಟ್ಟೆ ದೂಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಶಾಲೆಯ ಇಕೋ ಕ್ಲಬ್ ಪಡೆಕಟ್ಟಿಕೊಂಡು ಕೃಷಿನಾಟಿ ಮಾಡುವ ಮೂಲಕ ಸ್ಥಳೀಯ ಹುಬ್ಬೆರಿಸುವಂತೆ ಮಾಡಿದ್ದಾರೆ.

ಬರೇ ಶೈಕ್ಷಣಿಕವಾಗಿ ತೋಡಗಿಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ಇಲ್ಲಿನ ಐವತ್ತಕ್ಕಕ್ಕೂ ಅಧಿಕ ವಿದ್ಯಾರ್ಥಿಗಳು ಭತ್ತದ ನಾಟಿ ಮಾಡುವ ಕಾರ್ಯ ವಿಧಾನ,ಅದರ ಪೋಷಣೆ ಆರೈಕೆ, ಮುಂದಿನ ಫಸಲು ಹೇಗೆ ಬರುತ್ತದೆ ಎಂಬುವುದರ ಬಗ್ಗೆ ಶಿಕ್ಷಕರು ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಕೃಷಿಕರಿಂದ ಮಾಹಿತಿ ಪಡೆದು ಗದ್ದೆಗೆ ಇಳಿದು ತಾವು ಕೂಡಾ ನಾಟಿಗೆ ಸೈ ಎನ್ನಿಸಿಕೊಂಡರು.
ವಿದ್ಯಾರ್ಥಿಗಳ ಪಾಠಪ್ರವಚನಗಳ ನಡುವೆ ಇಂಥಹ ಬೆಳವಣಿಗೆಯಲ್ಲಿ ತೋಡಗಿಸಿಕೊಳ್ಳುವಿಕೆಗೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದು ಪ್ರಸ್ತುತ ಆಂಗ್ಲ ವ್ಯಾಮೂಹದ ನಡುವೆ ಸಾಂಪ್ರಾದಾಯಿಕ ಶೈಕ್ಷಣಿಕ ಕಾರ್ಯ, ಮುಂದಿನ ಭವ್ಯ ಭವಿಷ್ಯದ ಬದ್ರ ಬುನಾದಿಗೆ ವಿದ್ಯಾರ್ಥಿಗಳು ಫಿದಾ ಹೇಳಿದ್ದಾರೆ.
ಕ್ರೀಯಾಶೀಲ ಶಿಕ್ಷಕ ಸಲಹೆ ಕೊಡುಗೆ
ಸಾಮಾನ್ಯವಾಗಿ ಇಂದಿನ ಶೈಕ್ಷಣಿಕ ಕ್ಷೇತ್ರ ಎಂಬುವುದು ಪೈಪೋಟಿಯಿಂದ ಕೂಡಿದ್ದಾಗಿದೆ ಅದರ ನಡುವೆಯಲ್ಲಿ ಅಳಿದು ಉಳಿದ ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪುನರಶ್ಚೆತನಗೊಳ್ಳುವ ಆಶಾವಾದ ವ್ಯಕ್ತವಾಗುತ್ತಿದೆ ಇದನ್ನೆ ಉಪಯೋಗಿಸಿಕೊಂಡು ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರದ ಮೂಲಕ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.ಅದೇ ದೃಷ್ಠಿಕೋನದಿಂದ ಶಾಲೆಗಳಲ್ಲಿ ವಿದ್ಯಾರ್ಥಿ ಭವಿಷ್ಯದ ದಿನಗಳ ಮುನ್ನೆಚ್ಚರಿಕೆ ಕ್ರಮವಾಗಿ ಈ ರೀತಿಯ ಕೃಷಿ ಕಾಯಕಕ್ಕೆ ತೋಡಗಿಸಿಕೊಳ್ಳುವ ಮನೋಭಿಲಾಷೆ ಅರ್ಥಪೂರ್ಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ
ಶಾಲಾ ಎಸ್‍ಡಿಎಂಸಿ ಅಧ್ಯಕ್ಷರ ಗದ್ದೆಯಲ್ಲೆ ವಿದ್ಯಾರ್ಥಿಗಳು ಮಿಂದ್ದೇದ್ದರು!
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡೆನಿಸ್ ಡಿಸೋಜ ತನ್ನ ಗದ್ದೆಯನ್ನು ವಿದ್ಯಾರ್ಥಿಗಳ ಮನೋ ಚಟುವಟಿಕೆಗೆ ವೇದಿಕೆ ಕಲ್ಪಿಸಿ ಯಂತ್ರೋಪಕರಣದ ನಾಟಿ ಕಾರ್ಯ, ಸಾಂಪ್ರದಾಯಿಕ ನಾಟಿಕಾರ್ಯ, ಪ್ರಕೃತಿದತ್ತವಾದ ಹಕ್ಕಿಗಳ ಕಲರವದ ನಡುವೆ ವಿದ್ಯಾರ್ಥಿಗಳಿಗೆ ಸುದೀರ್ಘವಾಗಿ ಮಾಹಿತಿ ನೀಡಿದರು. ಅದೇ ರೀತಿ ವಿದ್ಯಾರ್ಥಿಗಳು ಖುಶಿ ಖುಶಿಯಿಂದ ತಮ್ಮ ಶಾಲಾಭಿವೃದ್ಧಿ ಅಧ್ಯಕ್ಷರ ಕೃಷಿ ಗೆದ್ದೆಯಲ್ಲಿ ಮಿಂದೇಳುವಂತೆ ನಾಟಿಕಾರ್ಯಕ್ಕೆ ಧುಮುಕುವಂತೆ ಮಾಡಿದರು.
ವೀಣಾ ಟೀಚರ್ ವಿಜ್ಞಾನ ಶಿಕ್ಷಕಿ
ಇಕೋ ಕ್ಲಬ್ ಅಡಿಯಲ್ಲಿ ಪರಿಸರವನ್ನು ತಿಳಿಯುವುದು ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ನಾಟಿ ನಡೆಯುವ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿಗಳಿಗೆ ನೈಜ ಅನುಭವವನ್ನು ನೀಡುವುದರ ಮೂಲಕ ಪರಿಸರವನ್ನು ಹೇಗೆ ಉಳಿಸಬೇಕು ಪರಿಸರದೊಂದಿಗೆ ನಮ್ಮ ಬಾಂಧವ್ಯದ ಕುರಿತಾಗಿ ವಿವರಿಸಲಾಯಿತು.
ಸೇಸು ಮುಖ್ಯ ಶಿಕ್ಷಕಿ
ಇಕೋ ಕ್ಲಬ್ ಅಡಿಯಲ್ಲಿ ಪರಿಸರವನ್ನು ತಿಳಿಯುವುದು ಕಾರ್ಯಕ್ರಮದಡಿಯಲ್ಲಿ ನಾಟಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಿತು.ಇದರಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ನಾಟಿ ಮಾಡುವುದು ಹೇಗೆ ಅನ್ನುವುದು ತಿಳಿದು ತುಂಬಾ ಖುಷಿ ಪಟ್ಟರು. ಪ್ರಸ್ತುತ ಸಂದರ್ಭದಲ್ಲಿ ಇಂತಹ ಶಿಕ್ಷಣದ ಅಗತ್ಯತೆ ಇದೆ.
ಪ್ರತೀಕ 7ನೇ ತರಗತಿ
ನಮ್ಮ ಶಾಲಾ ವಿದ್ಯಾರ್ಥಿಗಳಿಗೊಂದು ಇದೊಂದು ವಿಶಿಷ್ಟ ನಾಟಿಯ ಅನುಭವ ಆಗಿದೆ ಆದರೆ ನಾವೇ ಆ ಕೆಲಸವನ್ನು ಮಾಡಿದಾಗ ನಮಗಾದ ಆನಂದಕ್ಕೆ ಸಾಟಿಯೇ ಇಲ್ಲ.ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇಂಂತಹ ಮಾಹಿತಿ ಅತ್ಯಗತ್ಯವಾಗಿದೆ ಅಲ್ಲದೆ ಈ ರೀತಿಯ ಅನುಭವ ಪಡೆಯಲು ಅವಕಾಶ ಮಾಡಿಕೊಟ್ಟಿರುವ ವೀಣಾ ಟೀಚರ್ ಹಾಗೂ ಮುಖ್ಯಶಿಕ್ಷಕಿ ಸೇಸು ಮೇಡಂಗೆ ಧನ್ಯವಾದಗಳು.











