ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಶ್ರೀ ರಕ್ತೇಶ್ವರಿ ದೇವಸ್ಥಾನ ಪಾಂಡೇಶ್ವರ ಸಾಸ್ತಾನ ಇಲ್ಲಿ ವರ್ಪಂಪ್ರತಿಯಂತೆ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ವಿಶೇಷವಾಗಿ ಶ್ರೀ ಲಕ್ಷ್ಮೀ ಪೂಜೆಯೊಂದಿಗೆ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ,ಮಹಾ ಮಂಗಳಾರತಿ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಗಳು ನೆರವೆರಿತು.

ವೇ.ಮೂ.ಗುಂಡ್ಮಿ ಚಂದ್ರಶೇಖರ ಶಾಸ್ತ್ರಿ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಿತು. ದೇವಳದ ಅಧ್ಯಕ್ಷ ಕೆ.ವಿ ರಮೇಶ್ ರಾವ್ ದೇವಳದ ಧಾರ್ಮಿಕ ಕಾರ್ಯಗಳನ್ನು ನೆರವೆರಿಸಿ ಭಕ್ತಾದಿಗಳಿಗೆ ಬಾಗಿನ ಸಹಿತ ಪ್ರಸಾದ ವಿತರಿಸಿದರು. ರಕ್ತೇಶ್ವರಿ ಬಳಗದ ಅಧ್ಯಕ್ಷ ವಿ.ನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.











