ಕುಂದಾಪುರ ಮಿರರ್ ಸುದ್ದಿ…
ಕೋಟ: ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ಹಂದಟ್ಟು- ದಾನಗುಂದು ಗೆಳೆಯರ ಬಳಗ ಸಭಾಭವನದಲ್ಲಿ ಆಸಾಡಿ ವಡ್ರ್ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಅದರಲ್ಲಿ ತಿನಿಸು ಸ್ಪರ್ಧೆಯಲ್ಲಿ ಪ್ರೇಮಸುರೇಶ್,ದ್ವಿತೀಯ ಗೀತಾ ಸುಬ್ಬಯ್ಯ,ಗ್ರಾಮೀಣ ಕ್ರೀಡಾ ವಿಭಾಗದಲ್ಲಿ ಗುಡ್ನ ಪ್ರಥಮ ಬಹುಮಾನ ಸುಮಿತ್ರ,ದ್ವಿತೀಯ ಸಾಧು, ಹಿಡಿಕಡ್ಡಿ ಸ್ಪರ್ಧೆಯಲ್ಲಿ ಗಿರೀಜಾ ,ದ್ವಿತೀಯ ಗೀತಾ ಬಹುಮಾನ ಪಡೆದರು.
ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ ಕೋಟ, ಗೀತಾನಂದ ಟ್ರಸ್ಟ್, ಮಣೂರು-ಪಡುಕರೆ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ ಕುಂದರ್,ಮಹಿಳಾ ಮಂಡಲ ಕೋಟದ ಅಧ್ಯಕ್ಷೆ ಸುಶೀಲ ಸೋಮಶೇಖರ್,ಅಭಿಜಿತ್ ಪಾಂಡೇಶ್ವರ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಮೃತ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿದರು.ಕಾರ್ಯಕ್ರಮವನ್ನು ಪಂಚವಣ್ದ ಸಂಚಾಲಕ ಅಜಿತ್ ಆಚಾರ್ಯ ನಿರೂಪಿಸಿ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.











