ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಕಾರವಾರ ವತಿಯಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧೀನದ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಕಿಟ್ ವಿತರಣೆ ಮಂಗಳವಾರ ನಡೆಯಿತು.

ವಿಶೇಷ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದ ತಲ್ಲೂರು ಗ್ರಾ.ಪಂ. ಸದಸ್ಯೆ ಜುಡಿತ್ ಮೆಂಡೋನ್ಸಾ, ಕುಂದಾಪುರ ಸಹಿತ ವಿವಿ‘ಡೆಗಳಲ್ಲಿ ೧೧೧ ಶಾಖೆಗಳನ್ನು ಹೊಂದಿರುವ ಈ ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ಇಂತಹ ಸಮಾಜಮುಖಿ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇದು ಮಾದರಿ ಕಾರ್‍ಯ. ಸಂಘದಿಂದ ಇನ್ನಷ್ಟು ಸೇವಾ ಕೈಂಕರ್ಯಗಳು ನಡೆಯಲಿ ಎಂದು ಶುಭಹಾರೈಸಿದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಾದರಿ ಕಾರ್‍ಯವನ್ನು ಕೈಗೊಂಡಿದೆ. ಈ ತಲ್ಲೂರಿನ ವಿಶೇಷ ಮಕ್ಕಳ ಶಾಲೆಯು ಜಿಲ್ಲೆಯಲ್ಲಿಯೇ ವಿಭಿನ್ನ ಕಾರ್‍ಯದ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದು ತಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದ ಬಿಲ್ಲವ ಹೇಳಿದರು.
ತಲ್ಲೂರು ಗ್ರಾ.ಪಂ. ಸದಸ್ಯ ಚಂದ್ರ ದೇವಾಡಿಗ, ನಾರಾಯಣ ವಿಶೇಷ ಮಕ್ಕಳ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಮಾತನಾಡಿದರು.
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್‌ನ ನಿರ್ದೇಶಕ ಮೈಕಲ್ ಡಿಸೋಜಾ, ರಿಕವರಿ ಆಫೀಸರ್ ಆರ್.ಜೆ. ನಾಯಕ್ ಉಪಸ್ಥಿತರಿದ್ದರು.
ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಮಾಧುರಿ ಸ್ವಾಗತಿಸಿ, ಶಶಿಧರ್ ಕಾರ್‍ಯಕ್ರಮ ನಿರೂಪಿಸಿದರು. ಗಂಗೊಳ್ಳಿಯ ಶಾಖೆಯ ಶ್ವೇತಾ ದೇವಾಡಿಗ ವರದಿ ವಾಚಿಸಿದರು. ವಿಶೇಷ ಮಕ್ಕಳ ಶಾಲೆಯ ಶಿಕ್ಷಕಿ ಪ್ರೇಮಾ ವಂದಿಸಿದರು.











