ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಎನ್. ವಿಷ್ಣುವರ್ಧನ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು ಇಂಟಲಿಜೆನ್ಸ್ ವಿಭಾಗದ ಎಸ್ ಪಿ ಆಗಿ ವರ್ಗಾವಣೆ ಮಾಡಿ ಸರಕಾರ ಆದೇಶ ನೀಡಿದೆ.
ಹಾಕೈ ಅಕ್ಷಯ್ ಮಚೀಂದ್ರ ಅವರನ್ನು ಉಡುಪಿಯ ನೂತನ ಎಸ್ ಪಿಯಾಗಿ ನೇಮಕ ಮಾಡಲಾಗಿದೆ. 2015 ರಲ್ಲಿ ಐಪಿಎಸ್ ಸೇವೆಗೆ ಅಕ್ಷಯ್ ಮಚೇಂದ್ರ ಸೇರಿದ್ದರು. ಈ ಹಿಂದೆ 2020 ರಲ್ಲಿ ಅಕ್ಷಯ್ ಮಚೇಂದ್ರರನ್ನು ಉಡುಪಿ ಎಸ್ ಪಿ ಆಗಿ ವರ್ಗಾವಣೆ ಮಾಡಿದ್ದ ಸರಕಾರ. ಒಂದೇ ದಿನದಲ್ಲಿ ಆದೇಶದಲ್ಲಿ ಬದಲಾವಣೆ ಮಾಡಿ ಎನ್. ವಿಷ್ಣುವರ್ಧನ್ ರನ್ನು ನೇಮಿಸಿ ಅಂದಿನ ಸರಕಾರ ಆದೇಶ ನೀಡಿದ್ದರು.











