ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೇವಾ ಕಛೇರಿಯನ್ನು ಉಡುಪಿಯ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀ ನಾರಾಯಣ ಕಾರಂತ ಉದ್ಘಾಟಿಸಿದರು.
ದೇವಸ್ಥಾನದ ವತಿಯಿಂದ ಎಂ.ಜಿ.ಎಂ ಕಾಲೇಜಿಗೆ ನೂತನವಾಗಿ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಚಿತ್ರಪಾಡಿಯ ಲಕ್ಷ್ಮೀನಾರಾಯಣ ಕಾರಂತ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಉಪಾಧ್ಯ ವಹಿಸಿದ್ದರು, ಈ ವೇಳೆ ದೇವಸ್ಥಾನದ ಗೌರವ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಮತ್ತು ಸಾಲಿಗ್ರಾಮ ಪಟ್ಟಣಪಂಚಾಯತ್‍ನ ಗುಂಡ್ಮಿ ವಾರ್ಡಿನ ಕೌನ್ಸಿಲರಾದ ದೇವೇಂದ್ರ ದೇವಾಡಿಗ, ದೇವಸ್ಥಾನದ ಕಾರ್ಯದರ್ಶಿ ಆನಂದ ಗಾಣಿಗ, ಕಾರ್ಯಕಾರಿ ಮಂಡಳಿ ಸದಸ್ಯರರಾದ ಶಂಕರ ಆಚಾರ್, ಶೀನ ನಾಯಿರಿ, ಸಂಜೀವ ಆಚಾರ್, ರಾಜು ಪೂಜಾರಿ, ರಾಘವೇಂದ್ರ ಆಚಾರ್, ಉದಯ ಗಾಣಿಗ,ಭಾಸ್ಕರ್ ಕುಂದರ್, ಗಣೇಶ್ ಗಾಣಿಗ, ಸುರೇಶ ಗಾಣಿಗ, ಪದ್ಮನಾಭ ಆಚಾರ್, ಶ್ರೀಧರ್ ಗಾಣಿಗ, ಅರ್ಚಕ ಸುಧೀರ್ ಐತಾಳ್, ಸಂತೆಕಟ್ಟೆ ಸುಬ್ರಮಣ್ಯ ಗಾಣಿಗ,ಉಪಸ್ಥಿತರಿದ್ದರು.
ದೇವಸ್ಥಾನ ದ ಕೋಶಾಧಿಕಾರಿ ನಾಗೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











