ಕುಂದಾಪುರ ಮಿರರ್ ಸುದ್ದಿ…
ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ಇತ್ತೀಚಿಗೆ ನೆರವೇರಿತು.
ಉಪ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಎಂ.ಜೆ.ಎಫ್ ಇವರು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಅಧ್ಯಕ್ಷರಾಗಿ, ಅಜಿತ್ ಶೆಟ್ಟಿ ಕೊತ್ತಾಡಿ ಕಾರ್ಯದರ್ಶಿಯಾಗಿ, ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಕೋಶಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪದಗ್ರಹಣ ಸಮಾರಂಭದ ಸೇವಾ ಕಾರ್ಯಕ್ರಮದ ಅಂಗವಾಗಿ ಗುಲಾಬಿ ಬನ್ನಾಡಿ ಮತ್ತು ಕೃಷ್ಣ ಬಡಾಬೆಟ್ಟು ಇವರಿಗೆ ವೈದ್ಯಕೀಯ ಧನಸಹಾಯ ಹಾಗೂ ಶ್ರೀ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ಮಧುವನ ಮತ್ತು ವಡ್ಡರ್ಸೆ ಸರಕಾರಿ ಪ್ರೌಢ ಶಾಲೆ ಗಳ ವಿದ್ಯಾರ್ಥಿಗಳ ಪರಿಕರಿಗಳಿಗೆ ಧನಸಹಾಯ ನೀಡಲಾಯಿತು.
1ನೇ ಉಪ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೋ, ರೀಜನ್ ಚಯರ್ ಪರ್ಸನ್ ಲಯನ್ ಭೋಜರಾಜ ಶೆಟ್ಟಿ, ಝೋನ್ ಚಯರ್ ಮ್ಯಾನ್ ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ, ಎಕ್ಸ್ಟೆಂಷನ್ ಚಯರ್ ಪರ್ಸನ್ ದಿನಕರ್ ಶೆಟ್ಟಿ ಎಂ ಶುಭಾಶಂಸನೆಗೈದರು.
ಬಿ.ಬಿ. ಪ್ರವೀಣ್ ಹೆಗ್ಡೆ ಪ್ರಾರ್ಥಿಸಿದರು, ಅಚ್ಲಾಡಿ ಸುಧಾಕರ ಶೆಟ್ಟಿ ಫ್ಲ್ಯಾಗ್ ಸೆಲ್ಯುಟೇಷನ್ ಹಾಗೂ ಮಹೇಂದ್ರ ಆಚಾರ್ ಮಧುವನ ಲಯನ್ ಕೋಡ್ ಆಫ್ ಎಥಿಕ್ಸ್ ಮಾಡಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಇದರ ಸ್ಥಾಪಕಾಧ್ಯಕ್ಷ ವಕೀಲರಾದ ಬನ್ನಾಡಿ ಸೋಮನಾಥ ಹೆಗ್ಡೆ ಪದಗ್ರಹಣ ಅಧಿಕಾರಿ ಯವರನ್ನು ಹಾಗೂ ಕೂರಾಡಿ ಸಂತೋಷ್ ಕುಮಾರ್ ಶೆಟ್ಟಿ ನೂತನ ಅಧ್ಯಕ್ಷರನ್ನು ಪರಿಚಯಿಸಿದರು.
2021-22 ನೇ ಸಾಲಿನ ಅಧ್ಯಕ್ಷ ವಕೀಲರಾದ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. 2021-22 ನೇ ಸಾಲಿನ ವಲಯ ಕಾರ್ಯದರ್ಶಿ ಪ್ರೋ|| ಯಾಳಹಕ್ಲು ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ವಂದಿಸಿದರು.











