ಕುಂದಾಪುರ: ನಾನೂ ಸಾವರ್ಕರ್, ನಾವೂ ಸಾವರ್ಕರ್ ಮಾನವ ಸರಪಳಿ ಅಭಿಯಾನ

0
307

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಇಂದಿನ ರಾಜಕಾರಣಿಗಳಿಗೆ ಜೈಲು ಶಿಕ್ಷಯಾದರೇ ವಿಲಾಸಿ ಸೌಲಭ್ಯವನ್ನು ಜೈಲಿನಲ್ಲಿ ಪಡೆಯುತ್ತಾರೆ, ಆದರೆ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಕಠೋರ ಶಿಕ್ಷೆ ಅನುಭವಿಸಿದ್ದಾರೆ. ದೇಶಕ್ಕಾಗಿ ತಮ್ಮ ಜೀವಿತಾವಧಿಯ ಹಲವು ವರ್ಷಗಳ ಕಾಲ ಜೈಲಲ್ಲೇ ಕಳೆದಿದ್ದಾರೆ. ಇಂತಹ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದರೆ ಸುಮ್ಮನಿರೋದಿಲ್ಲ ಎಂದು ಹಿಂದೂ ಯುವ ವಾಹಿನಿಯ ಪ್ರಮುಖ್ ಅಭಿಜಿತ್ ಕರ್ಕುಂಜೆ ಎಚ್ಚರಿಕೆ ನೀಡಿದರು.

Click Here

ಗುರುವಾರ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಅವರಿಗೆ ಮಾಡಲಾಗುತ್ತಿರುವ ಅವಮಾನವನ್ನು ಖಂಡಿಸಿ, ಹಿಂದೂ ಜಾಗರಣ ವೇದಿಕೆ ಯುವ ವಿಭಾಗ, ಹಿಂದೂ ಯುವ ವಾಹಿನಿ ಕುಂದಾಪುರ ನೇತೃತ್ವದಲ್ಲಿ ನಾನೂ ಸಾವರ್ಕರ್, ನಾವೂ ಸಾವರ್ಕರ್ ಮಾನವ ಸರಪಳಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದಾರೆ. ದೇಶಕ್ಕೋಸ್ಕರ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ಅವರನ್ನು ಇಂದು ಅಪಮಾನ ಮಾಡಲಾಗುತ್ತಿರುವುದು ಖಂಡನೀಯ. ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವರ್ಕರ್ ಅವರ ತ್ಯಾಗ ಅಪಾರ ಎಂದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರವೀಣ್ ಯಕ್ಷಿಮಠ, ಶಂಕರ್ ಕೋಟ, ಉಮೇಶ್ ನಾಯ್ಕ್ ಸೂಢ, ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕರಿಕೇಶ್, ಕಿರಣ್ ಕೋಟೇಶ್ವರ, ಆದರ್ಶ್ ಕೋಟೇಶ್ವರ, ರಾಕೇಶ್ ಕೋಟೇಶ್ವರ, ಪುನೀತ್ ಕೋಟೇಶ್ವರ, ಸುಶಾನ್ ದೇವ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here